ಡೆಲ್ಲಿ ವಿರುದ್ಧ ಗುಜರಾತ್ ಲಯನ್ಸ್ ಗೆ 1 ರನ್ ಗಳ ರೋಚಕ ಜಯ

ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ 1 ರನ್ ಗಳಿಂದ ರೋಚಕ ಜಯ ಗಳಿಸಿದೆ...
ಗುಜರಾತ್ ಲಯನ್ಸ್
ಗುಜರಾತ್ ಲಯನ್ಸ್
Updated on

ನವದೆಹಲಿ: ಐಪಿಎಲ್ 9ನೇ ಆವೃತ್ತಿಯ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ 1 ರನ್ ಗಳಿಂದ ರೋಚಕ ಜಯ ಗಳಿಸಿದೆ.

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಲಯನ್ಸ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 172 ಗಳಿಸಿತು. 173 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಡೇರ್ ಡೇವಿಲ್ಸ್ ತಂಡ 5 ವಿಕೆಟ್ ಗೆ 171 ರನ್ ಗಳಿಸಿ 1 ರನ್ ನಿಂದ ಗುಜರಾತ್ ಗೆ ಶರಣಾಯಿತು.

ಡೆಲ್ಲಿ ಪರ ಕ್ವಿಂಟನ್ ಡಿಕಾಕ್ 5, ಸ್ಯಾಮ್ಸನ್ 1, ಕರುಣ್ ನಾಯರ್ 9, ಜೆಪಿ ಡುಮಿನಿ 48, ರಿಷಬ್ 20, ಕ್ರಿಸ್ ಮೋರಿಸ್ ಅಜೇಯ 82 ರನ್ ಹಾಗೂ ಪವನ್ ನೇಗಿ 3 ರನ್ ಗಳಿಸಿದ್ದಾರೆ.

ಗುಜರಾತ್ ಪರ ಧವಳ್ ಕುಲಕರ್ಣಿ 3, ಡ್ವೇನ್ ಬ್ರಾವೋ ಹಾಗೂ ಫಾಲ್ಕನರ್ ತಲಾ 1 ವಿಕೆಟ್ ಪಡೆದಿದ್ದಾರೆ.

ಗುಜರಾತ್ ಪರ ಡ್ವೇನ್ ಸ್ಮಿತ್ 53, ಬ್ರೆಂಡನ್ ಮೆಕ್ಕಲಂ 60, ಸುರೇಶ್ ರೈನಾ 2, ಕಾರ್ತಿಕ್ 19, ಜಡೇಜಾ 4, ಇಶಾನ್ ಕಿಶನ್ 2, ಡ್ವೇನ್ ಬ್ರಾವೋ ಅಜೇಯ 7 ಹಾಗೂ ಜೇಮ್ಸ್ ಫಾಲ್ಕನರ್ 22 ರನ್ ಗಳಿಸಿದ್ದಾರೆ.

ಡೆಲ್ಲಿ ಪರ ಇಮ್ರಾನ್ ತಾಹಿರ್ 3, ಕ್ರಿಸ್ ಮೋರಿಸ್ 2, ಜೆಪಿ ಡುಮಿನಿ 1 ವಿಕೆಟ್ ಪಡೆದಿದ್ದಾರೆ.

ಗುಜರಾತ್ ಲಯನ್ಸ್ ತಂಡ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com