ಟಿ20: ವರ್ಷದಲ್ಲಿ ಅತ್ಯಧಿಕ ವಿಕೆಟ್ ಪಡೆದು ಬುಮ್ರಾ ಹೊಸ ದಾಖಲೆ

ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಟೀಂ ಇಂಡಿಯಾ ಪರ ಆಡಿದ್ದ ಜಸ್ ಪ್ರೀತ್...
ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ

ಮುಂಬೈ: ಅಮೆರಿಕದ ಫ್ಲೋರಿಡಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಸೋತಿರಬಹುದು. ಆದರೆ ಟೀಂ ಇಂಡಿಯಾ ಪರ ಆಡಿದ್ದ ಜಸ್ ಪ್ರೀತ್ ಬುಮ್ರಾ ಮಾತ್ರ ನೂತನ ದಾಖಲೆ ಮಾಡಿದ್ದಾರೆ.

ವರ್ಷವೊಂದರಲ್ಲಿ ಅತ್ಯಧಿಕ ಟಿ20 ವಿಕೆಟ್ ಕಿತ್ತ ಬೌಲರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬುಮ್ರಾ 2 ವಿಕೆಟ್ ಪಡೆದು ಈ ದಾಖಲೆ ನಿರ್ಮಿಸಿದ್ದಾರೆ.

2010ರಲ್ಲಿ ಆಸ್ಟ್ರೇಲಿಯಾದ ಡರ್ಕ್ ನ್ಯಾನ್ಸ್ 14 ಪಂದ್ಯಗಳಲ್ಲಿ 27 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಈ ದಾಖಲೆಯನ್ನು ಅಳಿಸಿಹಾಕಿರುವ ಬುಮ್ರಾ ಒಟ್ಟಾರೆ 21 ಪಂದ್ಯದಲ್ಲಿ 28 ವಿಕೆಟ್ ಪಡೆದು ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್ ನಲ್ಲಿ ಆಡುವ ಮೂಲಕ ಬಿಸಿಸಿಐ ಗಮನ ಸೆಳೆದಿದ್ದ ಜಸ್ ಪ್ರೀತ್ ಬುಮ್ರಾ ಇದೇ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com