
ನವದೆಹಲಿ: ಬ್ರಿಟಿಷ್ ಮೂಲದ ಹಜೆಲ್ ಕೀಚ್ ನವೆಂಬರ್ 30 ರಂದು ಭಾರತೀಯ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಸಿಖ್ ಸಮುದಾಯದ ಸಂಪ್ರದಾಯದಂತೆ ಪಂಜಾಬ್ ನ ಗುರುದ್ವಾರ ಸಾಹೀಬ್ ನಲ್ಲಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ವಿವಾಹದ ವೇಳೆ ಹಜೇಲ್ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಸಿಖ್ ಸಂತ ಬಾಬಾ ರಾಮ್ ಸಿಂಗ್ ಜಿ ಸಲಹೆ ಮೇರೆಗೆ ಗುರ್ ಬಸಂತ್ ಕೌರ್ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಯುವರಾಜ್ ಸಿಂಗ್ ಮತ್ತು ಆತನ ತಾಯಿ ಶಬ್ನನಂ ಸಿಂಗ್ ಸಿಖ್ ಸಂತರ ಕಟ್ಟಾ ಅನುಯಾಯಿಗಳು, ಹೀಗಾಗಿ ಹಜೇಲ್ ಕೀಚ್ ಸಹ ಅವರ ದಾರಿಯನ್ನೇ ಅನುಸರಿಸುತ್ತಾರೆ ಎಂದು ಹೇಳಲಾಗಿದೆ.
ಹಜೇಲ್ ಕೂಡ ಹಲವು ಬಾರಿ ನಮ್ಮ ಗುರೂಜಿಯನ್ನು ಭೇಟಿ ಮಾಡಿದ್ದಾಳೆ. ಆಕೆ ನಿಜವಾಗಿಯೂ ನಮ್ಮ ಧರ್ಮದ ರೀತಿ ನೀತಿಗಳನ್ನು ಒಪ್ಪಿಕೊಂಡಿದ್ದು, ಅದಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದಾಳೆ. ನಮ್ಮ ಧರ್ಮಗುರುವನ್ನು ನಾವು ಎಂದು ಪ್ರಶ್ನಿಸಬಾರದು ಎಂಬುದನ್ನು ಆಕೆ ಅರಿತಿದ್ದಾಳೆ. ಕ್ಯಾನ್ಸರ್ ನಿಂದ ಯುವರಾಜ್ ಸಿಂಗ್ ನನ್ನು ನಾವು ಹೇಗೆ ರಕ್ಷಿಸಿಕೊಂಡೆವು ಎಂಬದು ನಮಗೆ ಮಾತ್ರ ಗೊತ್ತು ಎಂದು ಯುವರಾಜ್ ತಾಯಿ ಶಬ್ನನಂ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
Advertisement