ಜಹೀರ್ ಖಾನ್, ಸಾಗರಿ ಘಾಟ್ಕೆ
ಕ್ರಿಕೆಟ್
'ಚಕ್ ದೇ ಇಂಡಿಯಾ' ಸಾಗರಿಕಾ ಜತೆ ಜಹೀರ್ ಡೇಟಿಂಗ್
ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಚಕ್ ದೇ ಇಂಡಿಯಾ ಸಿನಿಮಾದ ನಟಿ ಸಾಗರಿಕಾ ಘಾಟ್ಕೆ ಜತೆ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ...
ಮುಂಬೈ: ಟೀಂ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಚಕ್ ದೇ ಇಂಡಿಯಾ ಸಿನಿಮಾದ ನಟಿ ಸಾಗರಿಕಾ ಘಾಟ್ಕೆ ಜತೆ ಸದ್ದಿಲ್ಲದೆ ಡೇಟಿಂಗ್ ನಡೆಸುತ್ತಿದ್ದಾರೆ.
ಈ ಜೋಡಿಯ ಲವ್ ಸ್ಟೋರಿ ಜಗಜ್ಜಾಹೀರ್ ಆಗಿದ್ದು ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಬಾಲಿವುಡ್ ನಟಿ ಹಜೆಲ್ ಕೀಚ್ ವಿವಾಹ ಸಂದರ್ಭದಲ್ಲಿ. ಯುವಿ ವಿವಾಹಕ್ಕೆ 38 ವರ್ಷದ ಜಹೀರ್ ಖಾನ್ ಹಾಗೂ 30 ವರ್ಷದ ಸಾಗರಿಕಾ ಘಾಟ್ಕೆ ಜತೆಯಾಗಿ ಬಂದಿದ್ದು ಫೋಟೋಗೆ ಪೋಸ್ ನೀಡಿದ್ದರು.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ಜಹೀರ್ ಈ ಮುನ್ನ ಮತ್ತೊರ್ವ ಬಾಲಿವುಡ್ ನಟಿ ಇಶಾ ಶೆರ್ವಾನಿ ಜತೆ ಡೇಟಿಂಗ್ ನಲ್ಲಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ