5ನೇ ಟೆಸ್ಟ್: ಮೊದಲ ಇನಿಂಗ್ಸ್ ನಲ್ಲಿ 477ಕ್ಕೆ ಇಂಗ್ಲೆಂಡ್ ಆಲೌಟ್, ಭಾರತ 60/0

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 157.2 ಓವರ್‌ಗಳಲ್ಲಿ 477 ರನ್‌ ಗಳಿಸಿ ಆಲೌಟ್‌ ಆಗಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 157.2 ಓವರ್‌ಗಳಲ್ಲಿ 477 ರನ್‌ ಗಳಿಸಿ ಆಲೌಟ್‌ ಆಗಿದೆ.
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದಾಟದ ಆಂತ್ಯಕ್ಕೆ ನಾಲ್ಕು ವಿಕೆಟ್‌ ನಷ್ಟಕ್ಕೆ 284 ರನ್‌ ಗಳಿಸಿದ್ದ ಇಂಗ್ಲೆಂಡ್, ಶನಿವಾರ ಎರಡನೇ ದಿನದಾಟದಲ್ಲಿ ಒಟ್ಟು 477 ರನ್ ಕಲೆಹಾಕಿದೆ. 
ನಿನ್ನೆ ಶತಕ ಗಳಿಸಿ ಇನ್ನು ಔಟಾಗದೆ ಉಳಿದಿದ್ದ ಇಂಗ್ಲೆಂಡ್ ನ ಮೊಹಿನ್ ಅಲಿ ಇಂದು ಎರಡನೇ ದಿನದಾಟ ಆರಂಭಿಸಿ, 146 ರನ್‌ ಗಳಿಸಿ ಉಮೇಶ್‌ ಯಾದವ್‌ಗೆ ವಿಕೆಟ್‌ ಒಪ್ಪಿಸಿದ್ದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಆರಂಭದಲ್ಲಿ ಆಘಾತ ಕಂಡರೂ ನಂತರ ಮೊಹಿನ್ ಅಲಿ, ಲಿಯಾಮ ಡಾಸನ್, ಆದಿಲ್ ರಶೀದ್ ಉತ್ತಮ ಆಟದ ನೆರವಿನಿಂದ ಬೃಹತ್‌ ಮೊತ್ತವನ್ನು ಕಲೆ ಹಾಕಿದೆ.
ಮೊದಲ ಇನಿಂಗ್ಸ್‌ ಆರಂಭಿಸಿರುವ ಭಾರತ ವಿಕೆಟ್‌ ನಷ್ಟವಿಲ್ಲದೆ 60 ರನ್‌ ಗಳಿಸಿದೆ. (ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ 30, ಪಾರ್ಥಿವ್‌ ಪಟೇಲ್‌ ಬ್ಯಾಟಿಂಗ್‌ 28 ರನ್‌)
ಇಂಗ್ಲೆಂಡ್ ಪರ: ಅಲಸ್ಟೇರ್ ಕುಕ್ 10, ಕೇಟನ್ ಜಿನಿಂಗ್ಸ್ 1, ಜೋ ರೂಟ್ 88, ಜಾನಿ ಬೆಸ್ಟೊವ್ 49, ಮೊಹಿನ್ ಅಲಿ 146, ಬೆನ್ ಸ್ಟೋಕ್ಸ್ 6, ಜಾಸ್ ಬಟ್ಲರ್ 5, ಆದಿಲ್ ರಶೀದ್ 60, ಸ್ಟುವರ್ಟ್ ಬ್ರಾಡ್ 19, ಜೇಕ್ ಬಾಲ್ 12, ಲಿಯಾಮ ಡಾಸನ್ ಬ್ಯಾಟಿಂಗ್‌ 66 ರನ್‌ ಗಳಿಸಿದ್ದಾರೆ.
ಭಾರತ ಪರ: ರವೀಂದ್ರ ಜಡೇಜ 3, ಉಮೇಶ್ ಯಾದವ್ 2, ಇಶಾಂತ್‌ ಶರ್ಮಾ 2, ರವಿಚಂದ್ರನ್ ಅಶ್ವಿನ್ 1, ಅಮಿತ್ ಮಿಶ್ರಾ 1 ವಿಕೆಟ್‌ ಪಡೆದು ಮಿಂಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com