ತ್ರಿಶತಕ ಬಾರಿಸಿದ ಕರುಣ್ ನಾಯರ್ ಬಗ್ಗೆ ನಿಮಗೆಷ್ಟು ಗೊತ್ತು?

ವಿರೇಂದ್ರ ಸೆಹ್ವಾಗ್ ನಂತರ ಸುಧೀರ್ಘ 12 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್ ಕೊನೆಯ ಪಂದ್ಯದಲ್ಲಿ ತ್ರಿಶತಕ ಸಾಧನೆ ಮಾಡಿದ ಕರುಣ್‌ ನಾಯರ್‌...
ಕರುಣ್ ನಾಯರ್
ಕರುಣ್ ನಾಯರ್
ಚೆನ್ನೈ: ವಿರೇಂದ್ರ ಸೆಹ್ವಾಗ್ ನಂತರ ಸುಧೀರ್ಘ 12 ವರ್ಷಗಳ ಬಳಿಕ ಭಾರತ-ಇಂಗ್ಲೆಂಡ್ ಕೊನೆಯ ಪಂದ್ಯದಲ್ಲಿ ತ್ರಿಶತಕ ಸಾಧನೆ ಮಾಡಿದ ಕರುಣ್‌ ನಾಯರ್‌ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕರುಣ್ ನಾಯರ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಟ್ಟು 303ರನ್‌ಗಳಿಸಿ ಮೂರನೇ ವ್ಯಕ್ತಿಯಾಗಿದ್ದಾರೆ. 
ಕೇರಿಬಿಯನ್ ಆಲ್ ರೌಂಡರ್ ಸರ್ ಗರ್ಫೀಲ್ಡ್ ಸೊಬೆರ್ಸ್ ಮತ್ತು ಆಸ್ಟ್ರೇಲಿಯಾದ ಬೊಬ್ ಸಿಂಪ್ಸೋನ್ ಸೇರಿದಂತೆ ಗ್ರೇಟ್ ಬ್ಯಾಟ್ಸ್ ಮನ್ ಗಳ ತ್ರಿಶತಕ ಕ್ಲಬ್ ಗೆ ಈಗ ನಾಯರ್ ಸೇರ್ಪಡೆಯಾಗಿದ್ದಾರೆ.
ಕರುಣ್ ನಾಯರ್ 300ರ ಕ್ಲಬ್ ಸೇರುತ್ತಿರುವ ಎರಡನೇ ಭಾರತೀಯ ಆಟಗಾರನಾಗಿದ್ದಾರೆ. ಈ ಹಿಂದೆ 2004ರಲ್ಲಿ ಪಾಕಿಸ್ತಾನ ವಿರುದ್ಧ 309ರನ್ ಗಳಿಸುವ ಮೂಲಕ ವೀರೇಂದ್ರ ಸೆಹ್ವಾಗ್ ಅವರು ತ್ರಿಶತಕ ಕ್ಲಬ್ ಸೇರಿದ್ದರು. ಸೆಹ್ವಾಗ್ ಅವರು 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸಿ ಮತ್ತೊಮ್ಮೆ ತ್ರಿಶತಕ ದಾಖಲಿಸಿದ್ದರು.
2014- 15ರಲ್ಲಿ ನಡೆದ ರಣಜಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಕರುಣ್ ನಾಯರ್ ಅವರು ಕರ್ನಾಟಕದ ಪರ 328ರನ್ ಗಳಿಸಿದ್ದರು.
ಕನ್ನಡಿಗ ಕರುಣ್ ನಾಯರ್ ಅವರು ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಾಗೂ ಮುಂಬೈಯಲ್ಲಿ ಗಾಯಾಳು ಅಜಿಂಕ್ಯಾ ರಹನೆ ಬದಲು ಸ್ಥಾನ ಪಡೆದಿದ್ದರು.
ಕರುಣ್ ನಾಯರ್ ಅವರು ಎರಡು ಐಪಿಎಲ್ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದಾರೆ.
2016ರ ಜೂನ್ ತಿಂಗಳಿನಲ್ಲಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದ ಕರುಣ್ ಅವರು ಮತ್ತೊಬ್ಬ ಕನ್ನಡಿಗ ಕೆಎಲ್ ರಾಹುಲ್ ಅವರೊಂದಿಗೆ ಜಿಂಬಾಬ್ವೆ ವಿರುದ್ಧ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್ ಮಾಡಿದ್ದರು.
ಈ ವರ್ಷದ ಐಪಿಎಲ್ ನಲ್ಲಿ 357ರನ್(15 ಪಂದ್ಯ, ಗರಿಷ್ಠ ರನ್ 83) ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರವಾಗಿದ್ದರು. 
2013-14ರ ರಣಜಿಯಲ್ಲಿ ಕರ್ನಾಟಕದ ಕರುಣ್ ನಾಯರ್ 151 ರನ್ ಗಳಿಸುವ ಮೂಲಕ 500 ರನ್ ಗಳ ಬೃಹತ್ ಮೊತ್ತ ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com