ಸೇಂಟ್ ಕಿಟ್ಸ್: ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್(ಡಬ್ಲ್ಯುಐಸಿಬಿ)ತಂಡದ ವಿರುದ್ಧದ ಎರಡನೇ ಹಾಗೂ ಅಂತಿಮ ಅಭ್ಯಾಸ ಪಂದ್ಯದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಉತ್ತಮ ಆಟದೊಂದಿಗೆ ಭಾರತ 364ಕ್ಕೆ ಆಲ್ ಔಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಡಬ್ಲ್ಯುಐಸಿಬಿ ಮೊದಲ ದಿನದಾಟದ ಅಂತ್ಯಕ್ಕೆ 62.5 ಓವರ್ಗಳಲ್ಲಿ 180ರನ್ಗಳಿಗೆ ಸರ್ವಪತನ ಕಂಡಿತು. ನಂತರ ಬ್ಯಾಟಿಂಗ್ ಮಾಡಿದ ಭಾರತ, ಜಡೇಜಾ, ಲೋಕೇಶ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಅವರ ಅರ್ಧ ಶತಕಗಳ ನೆರವಿನೊಂದಿಗೆ ಮೊದಲ ಇನಿಂಗ್ಸ್ ನಲ್ಲಿ 364ರನ್ ಗಳಿಸಿದೆ.
ವಾರ್ನರ್ ಪಾರ್ಕ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ದಾಳಿಗೆ ಡಬ್ಲ್ಯುಐಸಿಬಿ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಭಾರತದ ಸ್ಪಿನ್ ದಾಳಿಗೆ ಸಂಪೂರ್ಣ ವೈಫಲ್ಯ ಅನುಭವಿಸಿದ ಡಬ್ಲ್ಯುಐಸಿಬಿ ಬ್ಯಾಟ್ಸ್ಮನ್ಗಳು ಯಾವುದೇ ಹಂತದಲ್ಲೂ ಸುಧಾರಿಸಲಿಲ್ಲ. ರಂಕೀನ್ ಕಾರ್ನ್ವಾಲ್ (41), ಟೆಸ್ಟ್ ಸರಣಿಗೆ ವಿಂಡೀಸ್ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಜಮೈನ್ ಬ್ಲಾಕ್ವುಡ್ (36) ಹಾಗೂ ಆರಂಭಿಕ ಜಾನ್ ಕ್ಯಾಂಪ್ಬೆಲ್ (34) ಕೆಲಕಾಲ ಪ್ರತಿರೋಧ ನೀಡಿದರು. ಭಾರತದ ಪರ ಅಮಿತ್ ಮಿಶ್ರಾ 2 ವಿಕೆಟ್ ಹಾಗೂ ಸ್ಟುವರ್ಟ್ ಬಿನ್ನಿ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.