ಬಿಸಿಸಿಐಗೆ ಹಿನ್ನಡೆ, ಲೋಧಾ ಸಮಿತಿ ಶಿಫಾರಸು ಎತ್ತಿಹಿಡಿದ ಸುಪ್ರೀಂ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಲೋಧಾ ಸಮಿತಿ ನೀಡಿದ್ದ ಎಲ್ಲಾ ಶಿಫಾರಸುಗಳನ್ನು...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಲೋಧಾ ಸಮಿತಿ ನೀಡಿದ್ದ ಎಲ್ಲಾ ಶಿಫಾರಸುಗಳನ್ನು ಒಪ್ಪಿಕೊಳ್ಳುವ ಮೂಲಕ ಸುಪ್ರೀಂ ಕೋರ್ಟ್ ಸೋಮವಾರ ಐತಿಹಾಸಿಕ ತೀರ್ಪು ನೀಡಿದೆ.
ಲೋಧಾ ಸಮಿತಿಯ ಎಲ್ಲಾ ಶಿಫಾರಸುಗಳನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಅವುಗಳನ್ನು ಜಾರಿಗೆ ತರಲು ಆರು ತಿಂಗಳ ಕಾಲವಕಾಶ ನೀಡಿದೆ.
ಶಾಸಕರು, ಸಚಿವರನ್ನು ದೂರ ಇಡುವುದು ಸೇರಿದಂತೆ ಬಿಸಿಸಿಐಅನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ತರಬೇಕು ಎಂಬ ಶಿಫಾರಸುಗಳನ್ನೊಳಗೊಂಡ ವರದಿಯನ್ನು ನ್ಯಾಯಮೂರ್ತಿ ಎಂ.ಆರ್. ಲೋಧಾ ಸಮಿತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.
ವಿವಾದಗಳ ಸುಳಿಯಿಂದ ಹೊರ ಬರಲು ಬಿಸಿಸಿಐ ಆಡಳಿತ ಸುಧಾರಣೆಗೆ ಸಮಿತಿ ರಚಿಸಲಾಗಿತ್ತು. ನಿವೃತ್ತ ನ್ಯಾಯಮೂರ್ತಿಗಳಾದ ಲೋಧಾ, ಅಶೋಕ್ ಭಾನ್, ಆರ್‌.ವಿ. ರವೀಂದ್ರನ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ವರದಿ ಸಿದ್ಧ ಪಡಿಸಿದೆ.
ಲೋಧಾ ಸಮಿತಿಯ ಕೆಲವು ಪ್ರಮುಖ ಶಿಫಾರಸುಗಳು
ಯಾವುದೇ ಸಚಿವ ಅಥವಾ ಸರ್ಕಾರಿ ಅಧಿಕಾರಿಗಳು ಬಿಸಿಸಿಐ ಹುದ್ದೆ ವಹಿಸಿಕೊಳ್ಳುವಂತಿಲ್ಲ.
70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐ ಹುದ್ದೆ ಇಲ್ಲ
ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರಬೇಕು
9 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾರೂ ಪದಾಧಿಕಾರಿಗಳಾಗುವಂತಿಲ್ಲ
ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನವರು ಬಿಸಿಸಿಐನಲ್ಲಿ ಇರುವಂತಿಲ್ಲ
ಐಪಿಎಲ್‌ಗೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕು
ಬೆಟ್ಟಿಗ್ ನಿಷೇಧಕ್ಕೆ ಕಾಯ್ದೆ ತರಬೇಕು
ಒಬ್ಬರಿಗೆ ಒಂದೇ ಹುದ್ದೆ ನೀಡಬೇಕು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com