ನಾನು ದ್ವಂದ್ವ ನಿಲುವುಗಳ ಬಲಿಬಶು: ಅಸಭ್ಯ ವರ್ತನೆ ವಿವಾದದ ಬಗ್ಗೆ ಕ್ರಿಸ್ ಗೇಲ್ ಹೇಳಿಕೆ

ಆಸ್ಟ್ರೇಲಿಯಾದಲ್ಲಿ ಪತ್ರಕರ್ತೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಸ್ ಗೇಲ್ ತಾವು ದ್ವಂದ್ವ ನಿಲುವುಗಳ ಬಲಿಬಶು ಎಂದು ಎಂದು ಹೇಳಿಕೊಂಡಿದ್ದಾರೆ.
ನಾನು ದ್ವಂದ್ವ ನಿಲುವುಗಳ ಬಲಿಬಶು: ಅಸಭ್ಯ ವರ್ತನೆ ವಿವಾದದ ಬಗ್ಗೆ ಕ್ರಿಸ್ ಗೇಲ್ ಹೇಳಿಕೆ

ಲಂಡನ್: ಆಸ್ಟ್ರೇಲಿಯಾದಲ್ಲಿ ಪತ್ರಕರ್ತೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಸ್ ಗೇಲ್ ತಾವು ದ್ವಂದ್ವ ನಿಲುವುಗಳ ಬಲಿಬಶು ಎಂದು ಎಂದು ಹೇಳಿಕೊಂಡಿದ್ದಾರೆ. ಜನವರಿಯಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಬಿಗ್ ಬ್ಯಾಷ್ ಟಿ 20 ಲೀಗ್ ವೇಳೆ ಚಾನೆಲ್ 10 ನ ಮ್ಯಾಕಲಾಲಿನ್ ಎಂಬ ಪತ್ರಕರ್ತೆಯೊಂದಿಗೆ ಮಾತನಾಡುತ್ತಿದ್ದ ವೇಳೆ ಅಸಭ್ಯ ವರ್ತನೆ ತೋರಿದ್ದ ಕ್ರಿಸ್ ಗೇಲ್,  ನಾನು ನಿನಗೆ ಸಂದರ್ಶನವನ್ನು ನೀಡಲು ಬಯಸುತ್ತೇನೆ. ನಿನ್ನ ಕಣ್ಣುಗಳನ್ನು ನೋಡುವುದಕ್ಕಾಗಿಯೇ ನಾನಿಲ್ಲಿದ್ದೇನೆ. ಈ ಪಂದ್ಯವನ್ನು ನಾವು ಗೆಲ್ಲುತ್ತೇವೆ. ಇದಾದನಂತರ ಕುಡಿಯೋಣ. ಡೋಂಟ್ ಬ್ಲಷ್ ಬೇಬಿ ಎಂದು ಹೇಳುವ ಮೂಲಕ ಗೇಲ್ ವಿವಾದಕ್ಕೊಳಾಗಿದ್ದರು.

ಪತ್ರಕರ್ತೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದಕ್ಕೆ ಗೇಲ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಈ ವಿವಾದದ ಕಾರಣದಿಂದಲೇ  ಕ್ರಿಸ್ ಗೇಲ್ ನ ಒಪ್ಪಂದವನ್ನು ನವೀಕರಣ ಮಾಡದೆ ಆತನನ್ನು ಟೀಂ ನಿಂದ ಹೊರಗಿಡಲಾಗಿತ್ತು ಅಷ್ಟೇ ಅಲ್ಲದೇ ಕ್ರಿಸ್ ಗೇಲ್ ಗೆ ಆಸ್ಟ್ರೇಲಿಯಾ ಕ್ರಿಕೆಟ್ 7000 ಡಾಲರ್ ದಂಡ ವಿಧಿಸಿತ್ತು. ಈ ವಿವಾದಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಸ್ ಗೇಲ್, ಆಸ್ಟ್ರೇಲಿಯಾ ಕ್ರಿಕೆಟ್ ಬಿಗ್ ಬ್ಯಾಷ್ ನಿಂದ ತಮ್ಮನ್ನು ತಿರಸ್ಕರಿಸಿರುವುದು ದ್ವಂದ್ವ ನಿಲುವುಗಳಿಂದ ಎಂದು ಹೇಳಿದ್ದಾರೆ. ನನ್ನನು ನಿರ್ದಿಷ್ಟ ಸಮಯದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎನಿಸುತ್ತಿದೆ. ತಮಾಷೆ ಮಾಡಿದ್ದಕ್ಕಾಗಿ ನನ್ನನ್ನು ಬ್ರಾಂಡ್ ಮಾಡುವುದು ತಪ್ಪು ಎಂದೂ ಕ್ರಿಸ್ ಗೇಲ್ ನಾನು ದ್ವಂದ್ವ ನಿಲುವುಗಳ ಬಲಿಬಶು ಎಂದು ಕ್ರಿಸ್ ಗೇಲ್ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com