ಜಿಂಬಾಬ್ವೆ ಆಟಗಾರ ಹ್ಯಾಮಿಲ್ಟನ್
ಕ್ರಿಕೆಟ್
ಮೊದಲ ಟಿ20 ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಸೋಲು
ಏಕದಿನ ಸರಣಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಜಿಂಬಾಬ್ವೆ ತಂಡ ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಎರಡು ರನ್ ಗಳ ರೋಚಕ...
ಹರಾರೆ: ಏಕದಿನ ಸರಣಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಜಿಂಬಾಬ್ವೆ ತಂಡ ಶನಿವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಎರಡು ರನ್ ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಜಿಂಬಾಬ್ವೆ, ಭಾರತ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಪೇರಿಸಿ ಟೀಂ ಇಂಡಿಯಾ ಬೃಹತ್ ಸವಾಲು ನೀಡಿತು.
ಜಿಂಬಾಬ್ವೆಯ ಬೃಹತ್ ಸವಾಲನ್ನು ಬೆನ್ನಟ್ಟಿದ ಭಾರತ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168ರನ್ ಗಳಿಸಿ ಸೋಲಪ್ಪಿಕೊಂಡಿತು.
ಜಿಂಬಾಬ್ವೆಯ ಆರಂಭಿಕ ಆಟಗಾರರಾದ ಚಿಬಾಬಾ 20 (19) ಮತ್ತು ಮಸಕಜ 25(15) ಉತ್ತಮ ತಳಪಾಯ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದಲ್ಲಿ ವಾಲರ್ ಮತ್ತು ರಾಜಾ ಉತ್ತಮ ಜತೆಯಾಟವಾಡಿದರು. ಕೆಳಹಂತದಲ್ಲಿ ಕಣಕ್ಕಿಳಿದ ಚಿಗುಂಬರಾ 54 (26) ಬಿರುಸಿನ ಆಟವಾಡಿ ಜಿಂಬಾಬ್ವೆ ತಂಡದ ಮೊತ್ತ ಹೆಚ್ಚಿಸಿದರು.
ಭಾರತದ ಪರ ಬುಮ್ರಾ 24/2 (4) ಮತ್ತು ಅಕ್ಷರ್ ಪಟೇಲ್ 18/1 (4) ಮಾತ್ರ ಉತ್ತಮ ಬೌಲಿಂಗ್ ದಾಳಿ ನಡೆಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ