ಸಚಿನ್ ತೆಂಡೂಲ್ಕರ್
ಕ್ರಿಕೆಟ್
ಕುಮಾರ ಸಂಗಕ್ಕಾರರ ಆಲ್ ಟೈಮ್ ಇಲೆವನ್ ತಂಡದಲ್ಲಿ ಸಚಿನ್ ಗೆ ಸ್ಥಾನವಿಲ್ಲ
ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರರ ಆಲ್ ಟೈಮ್ ಇಲೆವನ್ ತಂಡದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೆ ಸ್ಥಾನವಿಲ್ಲ...
ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರರ ಆಲ್ ಟೈಮ್ ಇಲೆವನ್ ತಂಡದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಗೆ ಸ್ಥಾನವಿಲ್ಲ.
ಟೀಂ ಇಂಡಿಯಾದ ಮಾಜಿ ಆಟಗಾರ ಎ ತಂಡದ ಕೋಚ್ ಆಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಬಿಟ್ಟರೆ ಟೀಂ ಇಂಡಿಯಾದ ಯಾವೊಬ್ಬ ಆಟಗಾರನನ್ನು ಆಯ್ಕೆ ಮಾಡಿಲ್ಲ. ಬದಲಿಗೆ ಸಂಗಾಕ್ಕರ ತಂಡದಲ್ಲಿ ಲಂಕಾದ ಮೂವರು ಆಟಗಾರರು ಮತ್ತು ಆಸ್ಟ್ರೇಲಿಯಾದ ನಾಲ್ವರು ಆಟಗಾರರು ಸ್ಥಾನಪಡೆದಿದ್ದಾರೆ.
ಇನ್ನು ತಂಡಕ್ಕೆ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಅವರನ್ನು ತಂಡಕ್ಕೆ ಕರೆತಂದಿದ್ದು, ಸಚಿನ್ ಗೆ ಸ್ಥಾನ ಕೈತಪ್ಪಿದೆ.
ಆಲ್ ಟೈಮ್ ಇಲೆವೆನ್ ತಂಡದ ಆಟಗಾರರು
ಮ್ಯಾಥೂವ್ ಹೈಡನ್, ರಾಹುಲ್ ದ್ರಾವಿಡ್, ಬ್ರಿಯನ್ ಲಾರಾ, ರಿಕಿ ಪಾಂಟಿಂಗ್, ಅರವಿಂದ ಡಿ ಸೆಲ್ವಾ, ಜಾಕ್ವಾಸ್ ಕಾಲಿಸ್, ಆಡಂ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ಮುತ್ತಯ್ಯ ಮುರಳಿಧರನ್, ವಾಸೀಂ ಅಕ್ರಂ, ಚಮಿಂದಾ ವಾಸ್ ತಂಡದಲ್ಲಿ ಸ್ಥಾನಪಡೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ