
ಲಾಹೋರ್: ಭಾರತದ ಅಭಿಮಾನಿಗಳು ಪಾಕಿಸ್ತಾನಕ್ಕಿಂತ ಹೆಚ್ಚಿನ ಪ್ರೀತಿ ನೀಡುತ್ತಾರೆ ಎಂಬ ಹೇಳಿಕೆ ಪಾಕಿಸ್ತಾನ ಟಿ20 ತಂಡದ ನಾಯಕ ಶಾಹಿದ್ ಅಫ್ರಿದಿಗೆ ಮುಳ್ಳಾಗಿದ್ದು, ಹೇಳಿಕೆ ಕುರಿತಂತೆ ಲಾಹೋರ್ ಹೈಕೋರ್ಟ್ ಆಫ್ರಿದಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಆಫ್ರಿದಿಯ ಬೇಜವಾಬ್ದಾರಿಯುತ ಹೇಳಿಕೆಯಿಂದ ಲಕ್ಷಾಂತರ ಪಾಕಿಸ್ತಾನ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ನ್ಯಾಯವಾದಿ ಅಜರ್ ಸಿದ್ದಿಕಿ ಎಂಬುವರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಹೇಳಿಕೆ ಕುರಿತು 15 ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಕೋರ್ಟ್ ಆದೇಶಿಸಿದ್ದು, ಆಫ್ರಿದಿಗೆ ನೋಟಿಸ್ ಜಾರಿ ಮಾಡಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಹಿನ್ನೆಲೆ ಪಾಕಿಸ್ತಾನದಿಂದ ಕೋಲ್ಕತಗೆ ಆಗಮಿಸಿದ್ದ ಆಫ್ರಿದಿ ಸುದ್ದಿಗೋಷ್ಠಿಯಲ್ಲಿ ಭಾರತದಲ್ಲಿ ನಮಗೆ ಯಾವುದೇ ಆತಂಕವಿಲ್ಲ ಪಾಕಿಸ್ತಾನ ಅಭಿಮಾನಿಗಳಿಗಿಂತ ಭಾರತದ ಅಭಿಮಾನಿಗಳು ನಮಗೆ ಹೆಚ್ಚಿನ ಕ್ರೀಡಾಪ್ರೇಮ ನೀಡುತ್ತಾರೆ ಎಂಬ ಹೇಳಿಕೆ ನೀಡಿದ್ದರು.
Advertisement