ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದಿರುವ ನ್ಯೂಜಿ ಲ್ಯಾಂಡ್ ಸೆಮಿ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದಿದ್ದು, ಚೊಚ್ಚಲ ವಿಶ್ವಕಪ್ ಟಿ20 ಗೆಲ್ಲುವ ವಿಶ್ವಾಸದಲ್ಲಿದೆ.
ಆರಂಭಿಕ ಪಂದ್ಯದಲ್ಲೇ ಆತಿಥೇಯ ಭಾರತವನ್ನು ಅಲ್ಪ ಮೊತ್ತಕ್ಕೆ ಉದುರಿಸಿ ಜಯಭೇರಿ ಮೊಳಗಿಸಿದ್ದು 'ಬ್ಲ್ಯಾಕ್ ಕ್ಯಾಪ್ಸ್'ಗಳ ಮಹಾನ್ ಸಾಹಸ. ಇದು ಕಿವೀಸ್‌ನ ಉಳಿದೆಲ್ಲ ಗೆಲುವುಗಳಿಗೂ ಟಾನಿಕ್ ಆಗಿ ಪರಿಣಮಿಸಿತ್ತು.
2010ರ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಹೋಲಿಸಿದರೆ, ನ್ಯೂಜಿಲೆಂಡ್ ಫೇವರಿಟ್ ತಂಡವಾಗಿ ಗೋಚರಿಸಿದೆ. ಈವರೆಗೂ 13 ಟಿ20 ಪಂದ್ಯಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 4ರಲ್ಲಿ ಗೆದ್ದಿದ್ದರೆ, ಇಂಗ್ಲೆಂಡ್ 8ರಲ್ಲಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದುಗೊಂಡಿದೆ.