
ಬೆಂಗಳೂರು: 2016ರ ನವೆಂಬರ್ ನಲ್ಲಿ ನಡೆಯಲಿರುವ ಅಂಧರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ರಾಯಭಾರಿಯಾಗಿ ನೇಮಕವಾಗಿದ್ದಾರೆ.
2016ರ ನವೆಂಬರ್ 26 ರಿಂದ ಡಿಸೆಂಬರ್ 11ರವರೆಗೆ ಭಾರತದ ಪ್ರಮುಖ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಈ ಕೂಟಕ್ಕೆ ರಾಯಭಾರಿಯಾಗುವಂತೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಇದಕ್ಕೆ ರಾಹುಲ್ ಡ್ರಾವಿಡ್ ಸಕಾರಾತ್ಮಕವಾಗಿ ಸ್ಪಂದಿಸಿ ಒಪ್ಪಿಗೆ ಸೂಚಿಸಿದ್ದಾರೆ.
ಪ್ರಸಕ್ತ ಭಾರತದಲ್ಲಿ ಪುರುಷರ ಹಾಗೂ ಮಹಿಳೆಯ ಟಿ20 ವಿಶ್ವಕಪ್ ನಡೆಯುತ್ತಿದ್ದು, ಎರಡು ಕೂಟಗಳು ಫೈನಲ್ ಹಂತಕ್ಕೆ ಬಂದು ನಿಂತಿವೆ.
Advertisement