
ರಾಜ್ಕೋಟ್: ಐಪಿಎಲ್ ನಲ್ಲಿ ಲಯ ಕಂಡುಕೊಂಡಿರುವ ಡೆಲ್ಲಿ ಡೇಲ್ ಡೇವಿಲ್ಸ್ ತಂಡ ಬಲಿಷ್ಠ ಗುಜರಾತ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. 150 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 17.2 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಜಯ ಗಳಿಸಿತು.
ಡೆಲ್ಲಿ ಪರ ಡಿಕಾಕ್ 46, ರಿಷಭ್ ಪಂತ್ 69, ಸಂಜು ಸ್ಯಾಮ್ಸನ್ ಅಜೇಯ 19 ಹಾಗೂ ಜೆಪಿ ಡುಮಿನಿ 13 ರನ್ ಗಳಿಸಿದ್ದಾರೆ.
ಗುಜರಾತ್ ಪರ ಶಿವಿಲ್ ಕೌಶಿಕ್ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.
ಗುಜರಾತ್ ಪರ ಡ್ವೇನ್ ಸ್ಮಿತ್ 15, ಮೆಕ್ಕಲಂ 1, ಫಿಂಚ್ 5, ರೈನಾ 24, ದಿನೇಶ್ ಕಾರ್ತಿಕ್ 53, ಫಾಲ್ಕನರ್ 7, ಇಶಾನ್ ಕಿಶನ್ 2 ಹಾಗೂ ರವೀಂದ್ರ ಜಡೇಜಾ 36 ರನ್ ಗಳಿಸಿದ್ದಾರೆ.
ಡೆಲ್ಲಿ ಪರ ಶಾಬಾಬ್ ನದೀಂ 2, ಮೋಹಿಸ್, ಜಹೀರ್ ಖಾನ್, ಶಮಿ, ಅಮಿತ್ ಮಿಶ್ರಾ ತಲಾ 1 ವಿಕೆಟ್ ಪಡೆದಿದ್ದಾರೆ.
Advertisement