
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಯ ಕೊಡುಗೆಯನ್ನು ಆಸ್ಟ್ರೇಲಿಯಾದ ಸ್ಟುವರ್ಟ್ ಲಾ ತಿರಸ್ಕರಿಸಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಮಾಜಿ ಕೋಚ್ ಪೀಟರ್ ಮೂರ್ಸ್ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಹುದ್ದೆಯನ್ನು ತಿರಸ್ಕರಿಸಿದ ಬೆನ್ನಲ್ಲೆ. ಇದೀಗ ಸ್ಟುವರ್ಟ್ ಲಾ ಸಹ ಪಾಕ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
ತಾವು ತಕ್ಷಣವೇ ಹುದ್ದೆ ಸ್ವೀಕರಿಸಲು ಸಾಧ್ಯವಿಲ್ಲ ಈ ಹಿನ್ನೆಲೆ ಕೋಚ್ ಹುದ್ದೆಯನ್ನು ತಿರಸ್ಕರಿಸಿರುವುದಾಗಿ ಸ್ಟುವರ್ಟ್ ಲಾ ಕಾರಣ ನೀಡಿದ್ದಾರೆ. ಇನ್ನು ಪಾಕಿಸ್ತಾನ ತಂಡದ ಹೊಸ ಕೋಚ್ ಗಾಗಿ ಹುಡುಕಾಟದಲ್ಲಿನ ಅಡೆತಡೆಗಳು ಮುಂದುವರೆದಿದೆ.
ಕೋಚ್ ಹುದ್ದೆಗೆ ಸ್ಟುವರ್ಟ್ ಲಾ ಸಹ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಸಲಹೆಗಾರ ಹುದ್ದೆಯಲ್ಲಿ ಇರಲು ಆಸಕ್ತಿ ಹೊಂದಿದ್ದಾರೆ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಚೇರ್ಮನ್ ಶಹರಿಯಾರ್ ಖಾನ್ ತಿಳಿಸಿದರು.
Advertisement