
ದೆಹಲಿ: ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 7 ವಿಕೆಟ್ ಗಳಿಂದ ಜಯ ಗಳಿಸಿದೆ.
ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪುಣೆ ತಂಡದ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಡೆಲ್ಲಿ ನೀಡಿದ 163 ರನ್ ಗಳ ಗುರಿ ಬೆನ್ನಟ್ಟಿದ ಪುಣೆ ತಂಡದ ರಹಾನೆಯ ಅಜೇಯ 63 ರನ್ ಗಳ ನೆರವಿನಿಂದಾಗಿ ಗೆಲುವಿನ ನಗೆ ಬೀರಿತು.
ಪುಣೆ ಪರ ಅಜಿಂಕ್ಯ ರಹಾನೆ ಅಜೇಯ 63, ಖ್ವಾಜಾ 30, ತಿವಾರಿ 21, ಧೋನಿ 27 ಹಾಗೂ ಪೆರೇರಾ ಅಜೇಯ 14 ರನ್ ಗಳಿಸಿದ್ದಾರೆ.
ಡೆಲ್ಲಿ ಪರ ಇಮ್ರಾನ್ ತಾಹಿರ್ 2, ಅಮಿತ್ ಮಿಶ್ರಾ 1 ವಿಕೆಟ್ ಪಡೆದಿದ್ದಾರೆ.
ಡೆಲ್ಲಿ ಪರ ಪಾಂಟ್ 2, ಸ್ಯಾಮನ್ಸ್ 20, ನಾಯರ್ 32, ಜೆಪಿ ಡ್ಯುಮಿನಿ 34, ಬಿಲ್ಲಿಂಗ್ಸ್ 24, ಬ್ರಾಥ್ವೈಟ್ 20, ಯಾದವ್ 1, ನೇಗಿ ಅಜೇಯ 19 ಹಾಗೂ ಮೊಹಮ್ಮದ್ ಶಮಿ ಅಜೇಯ 2 ರನ್ ಗಳಿಸಿದ್ದಾರೆ.
ಪುಣೆ ಪರ ಬೋಲ್ಯಾಂಡ್, ಭಾಟಿಯಾ ತಲಾ 2 ವಿಕೆಟ್ ಪಡೆದರೆ, ದಿಂಡಾ 1 ವಿಕೆಟ್ ಪಡೆದಿದ್ದಾರೆ.
Advertisement