ಸಚಿನ್ ತೆಂಡೂಲ್ಕರ್
ಕ್ರಿಕೆಟ್
ಆಧುನಿಕ ಬ್ಯಾಟ್‌ನಿಂದ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲ, ಬೌಲರ್‍ಗಳಿಗೆ ದುಸ್ತರ: ಸಚಿನ್
ಆಧುನಿಕ ಕ್ರಿಕೆಟ್ ನಲ್ಲಿ ಬ್ಯಾಟನ್ನು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗುತ್ತಿದೆ. ಇದರಿಂದ ಸರಾಗವಾಗಿ ಬೌಂಡರಿಗಳನ್ನು ಸಿಡಿಸಬಹುದು...
ನವದೆಹಲಿ: ಆಧುನಿಕ ಕ್ರಿಕೆಟ್ ನಲ್ಲಿ ಬ್ಯಾಟನ್ನು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗುತ್ತಿದೆ. ಇದರಿಂದ ಸರಾಗವಾಗಿ ಬೌಂಡರಿಗಳನ್ನು ಸಿಡಿಸಬಹುದು. ಆದರೆ ಇದು ಬೌಲರ್ ಗಳಿಗೆ ದುಸ್ತರವಾಗಿದೆ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಮರುಕ ವ್ಯಕ್ತಪಡಿಸಿದ್ದಾರೆ.
ಕಳೆದ 2-3 ವರ್ಷಗಳಲ್ಲಿ ಇಂತಹ ಪರಿಸ್ಥಿತಿ ಉದ್ಭವಿಸಿದೆ. ಇದರಿಂದಾಗಿ ಬ್ಯಾಟ್ಸ್ ಮನ್ ಗಳು ಚೆಂಡನ್ನು ಸಲಿಸಾಗಿ ಬೌಂಡರಿಗೆ ಅಟ್ಟುತ್ತಾರೆ. ಬೌಲರ್ ಗಳ ಪರಿಸ್ಥಿತಿ ಬಗ್ಗೆ ನನಗೆ ಮರುಕವಿದೆ ಎಂದರು.
ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕ ಸಚಿನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ