
ನವದೆಹಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯು ಮೊದಲ ಕೆಲ ವಾರಗಳ ಕಾಲ ಡಲ್ ಆಗಿದ್ದರೂ ಅಂತಿಮ ಗಳಿಗೆಯಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಐಪಿಎಲ್ ಪ್ರಾರಂಭದ ದಿನಗಳಲ್ಲಿ ಕ್ರೀಡಾಂಗಣಗಳು ಖಾಲಿ ಖಾಲಿ ಹೊಡೆಯುತ್ತಿದ್ದವು. ಅದೇ ರೀತಿ ನೇರ ಪ್ರವಾಸ ವೀಕ್ಷಣೆಯಲ್ಲೂ ಡಲ್ ಆಗಿತ್ತು. ಆದರೆ ಇದೀಗ ಶೇ.60ರಷ್ಟು ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅಂದಾಜು ಸುಮಾರು 34.7 ಕೋಟಿ ಜನರು ವೀಕ್ಷಿಸಿದ್ದಾರೆ. 6ನೇ ವಾರಕ್ಕೆ ಟಿವಿ ವೀಕ್ಷಕರ ಪ್ರಮಾಣ 793 ಜಿವಿಎಂಗೆ ಏರಿಕೆಯಾಗಿದೆ. ಇದು ಭಾರತದ ಟವಿ ಮಾಧ್ಯಮದಲ್ಲಿ ಗರಿಷ್ಠ ವೀಕ್ಷಕರ ಗಮನ ಸೆಳೆದ ಟೂರ್ನಿಯಾಗಿದೆ ಎಂದು ಸೋನಿ ಪಿಕ್ಚರ್ ನೆಟ್ ವರ್ಕ್ ತಿಳಿಸಿದೆ.
Advertisement