ಕೃತಕ ಕಾಲು ಬೀಳುತ್ತಿದ್ದರೂ ಬೌಂಡರಿ ತಡೆದ ಲಿಯಾಮ್, ವಿಡಿಯೋ ವೈರಲ್

ಇಂಗ್ಲೆಂಡ್ ನ ಅಂಗವಿಕಲ ಕ್ರಿಕೆಟಿಗ ಲಿಯಾಮ್ ಥಾಮಸ್ ಕೃತಕ ಕಾಲು ಬಿದ್ದರೂ ಬೌಂಡರಿಗೆ ಹೋಗುತ್ತಿದ್ದ ಚೆಂಡನ್ನು ತಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ...
ಲಿಯಾಮ್ ಥಾಮಸ್
ಲಿಯಾಮ್ ಥಾಮಸ್

ದುಬೈ: ಇಂಗ್ಲೆಂಡ್ ನ ಅಂಗವಿಕಲ ಕ್ರಿಕೆಟಿಗ ಲಿಯಾಮ್ ಥಾಮಸ್ ಕೃತಕ ಕಾಲು ಬಿದ್ದರೂ ಬೌಂಡರಿಗೆ ಹೋಗುತ್ತಿದ್ದ ಚೆಂಡನ್ನು ತಡೆಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಥಾಮಸ್ ಅವರ ಕ್ರಿಕೆಟ್ ಶ್ರದ್ಧೆಯನ್ನು ಹಾಡಿ ಹೊಗಳುತ್ತಿದ್ದಾರೆ. ಥಾಮಸ್ ಗೆ ಇರುವ ಶ್ರದ್ಧೆ ಜಗತ್ತಿನ ಎಲ್ಲ ಕ್ರೀಡಾಪಟುಗಳಿಗೂ ಮಾದರಿ ಎಂದೆಲ್ಲ ವರ್ಣಿಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಕಾಡೆಮಿ ದುಬೈ ಆಹ್ವಾನಿತ ಟಿ20 ಟೂರ್ನಿಯಲ್ಲಿ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನ ಬ್ಯಾಟ್ಸ್ ಮನ್ ಡೀಪ್ ಸ್ಕ್ವೇರ್ ಲೆಗ್ ನಲ್ಲಿ ಬಾರಿಸಿದ ಚೆಂಡು ಬೌಂಡರಿಯತ್ತ ಹೋಗುತ್ತಿದ್ದಾಗ ವೇಗವಾಗಿ ಓಡಿದ ಲಿಯಾಮ್ ಬಿದ್ದು ಚೆಂಡನ್ನು ತಡೆದಿದ್ದಾರೆ. ಈ ವೇಳೆ ಅವರ ಬಲಗಾಲಿಗೆ ಜೋಡಿಸಿದ ಕೃತಕ ಕಾಲು ಬಿದ್ದುಹೋಗಿತ್ತು. ಆದರೂ ಇದನ್ನು ಲೆಕ್ಕಿಸಿದೆ ಒಂಟಿ ಕಾಲಿನಲ್ಲೇ ಓಡಿ ಚೆಂಡನ್ನು ಕೀಪರ್ ಎಸೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com