ಕನ್ನಡಿಗ ದ್ರಾವಿಡ್ ಅಂಧರ ಟಿ20 ವಿಶ್ವಕಪ್ ರಾಯಭಾರಿ

ಭಾರತದಲ್ಲಿ ಜನವರಿ 28 ರಿಂದ ಫೆಬ್ರವರಿ 12ರವರೆಗೆ ನಡಯಲಿರುವ ಅಂಧರ 2ನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿ ಕನ್ನಡಿಗ ಮಾಜಿ...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
ಬೆಂಗಳೂರು: ಭಾರತದಲ್ಲಿ ಜನವರಿ 28 ರಿಂದ ಫೆಬ್ರವರಿ 12ರವರೆಗೆ ನಡಯಲಿರುವ ಅಂಧರ 2ನೇ ಆವೃತ್ತಿಯ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರಾಯಭಾರಿಯಾಗಿ ಕನ್ನಡಿಗ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನೇಮಕಗೊಂಡಿದ್ದಾರೆ. 
ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ(ಸಿಎಬಿಐ) ಜಂಟಿಯಾಗಿ ನಡೆಸುತ್ತಿರುವ ಟೂರ್ನಿಯಲ್ಲಿ 10 ದೇಶಗಳು ಭಾಗವಹಿಸಲಿದ್ದು, ಪಂದ್ಯಗಳು ದೇಶದ 8 ನಗರಗಳಲ್ಲಿ ನಡೆಯಲಿವೆ ಎಂದು ಸಿಎಐಬಿ ಅಧ್ಯಕ್ಷ ಮಹಾಂತೇಶ್ ತಿಳಿಸಿದ್ದಾರೆ. 
ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನೇಪಾಳ, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸ್ಪರ್ಧಿಸಲಿವೆ. ಇನ್ನು ಟೂರ್ನಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. 
ಅಂಧರ ಟಿ20 ವಿಶ್ವಕಪ್ ರಾಯಭಾರಿ ದೊಡ್ಡ ಗೌರವ ಎಂದ ದ್ರಾವಿಡ್ 
ಅಂಧರ ಟಿ20 ವಿಶ್ವಕಪ್ ಟೂರ್ನಿಗೆ ರಾಯಭಾರಿಯಾಗಿ ನೇಮಕಗೊಂಡಿರುವುದು ತಮಗೆ ದೊಡ್ಡ ಗೌರವ ಎಂದು ಕ್ರಿಕಟ್ ದಿಗ್ಗಜ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com