ದಸರಾ ಗೆ ಚಾಲನೆ ನೀಡಿದ ಸಾಹಿತಿ ಚನ್ನವೀರ ಕಣವಿ
ದಸರಾ ಗೆ ಚಾಲನೆ ನೀಡಿದ ಸಾಹಿತಿ ಚನ್ನವೀರ ಕಣವಿ

ಕಾವೇರಿ ವಿವಾದಿಂದಾಗಿ ಕಳೆಗುಂದಿದ ವಿಶ್ವ ವಿಖ್ಯಾತ ಮೈಸೂರು ದಸರಾ

ತೀವ್ರ ಬಿಕ್ಕಟ್ಟಿಗೆ ಕಾರಣವಾಗಿರುವ ಕಾವೇರಿ ಸಮಸ್ಯೆ ವಿಶ್ವ ವಿಖ್ಯಾತ ಮೈಸೂರು ದಸರಾದ ಮೇಲೆ ಪರಿಣಾಮ...
Published on

ಮೈಸೂರು: ತೀವ್ರ ಬಿಕ್ಕಟ್ಟಿಗೆ ಕಾರಣವಾಗಿರುವ ಕಾವೇರಿ ಸಮಸ್ಯೆ ವಿಶ್ವ ವಿಖ್ಯಾತ ಮೈಸೂರು ದಸರಾದ ಮೇಲೆ ಪರಿಣಾಮ ಬೀರಿದೆ.

ಹೆಸರಾಂತ ಕವಿ ಚನ್ನವೀರ ಕಣವಿ ಚಾಮುಂಡಿ ಬೆಟ್ಟದಲ್ಲಿ ದಸರಾಗೆ ಚಾಲನೆ ನೀಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಣವಿ ತಮ್ಮ ಉದ್ಘಾಟನಾ ಭಾಷಣದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರು.

ಕನ್ನವೀರ ಕಣವಿ ಅವರ ಕುಟುಂಬವನ್ನು ಪೂರ್ಣಕುಂಭ ಮೇಳ, ಜಾನಪದ ನೃತ್ಯತಂಡದೊಂದಿಗೆ ಸ್ವಾಗತಿಸಲಾಯಿತು. ಹಸಿರು ದಸರಾ ಆಚರಣೆಗೆ ಕಣವಿ ಪ್ರಶಂಸಿದರು.

ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ಕಾವೇರಿ ವಿವಾದ ಸಂಬಂಧ ಸರ್ವ ಪಕ್ಷ ಸಭೆ ಹಿನ್ನೆಲೆಯಲ್ಲಿ ದಸರಾ ಹಬ್ಬದ ಸಂಭ್ರಮ ಕಾಣೆಯಾಗಿತ್ತು. ಸಿಎಂ ಸಿದ್ದರಾಮಯ್ಯ ಕಾವೇರಿ ವಿವಾದದ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದು ಎದ್ದು ಕಾಣುತ್ತಿತ್ತು.

ಕಾವೇರಿ ವಿಚಾರದಲ್ಲಿ ತಮಿಳುನಾಡು ಮಗ್ಗುಲು ಮುಳ್ಳಾಗಿ ಆಗಾಗ ಚುಚ್ಚುತ್ತಲೇ ಇರುತ್ತದೆ. ಸದ್ಯಕ್ಕೆ ಸಂಕಷ್ಟ ಸೂತ್ರ ರಚಿಸುವ ಮೂಲಕ ತುರ್ತು ಪರಿಹಾರ ಕಂಡುಕೊಳ್ಳಬೇಕು. ಕಾನೂನಿನ ಚೌಕಟ್ಟಿನಲ್ಲಿ ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಪರಿಹಾರ ರೂಪಿಸಬೇಕು. ನ್ಯಾಯಾಲಯ ಕೂಡ ಮಾನವೀಯ ದೃಷ್ಟಿಯಿಂದ ಪರಿಶೀಲಿಸುವ ಅಗತ್ಯವಿದೆ. ಜಲ ವಿವಾದಗಳಲ್ಲಿ ತಮ್ಮ ಪಕ್ಷದ ಹಿತಕ್ಕಿಂತ ರಾಜ್ಯದ ಹಿತ ಮುಖ್ಯ ಎಂಬುದನ್ನು ರಾಷ್ಟ್ರೀಯ ಪಕ್ಷಗಳು ಭಾವಿಸಬೇಕು’ ಎಂದು ಸಲಹೆ ನೀಡಿದ ಅವರು ಮೌಢ್ಯಾಚರಣೆ ನಿಷೇಧ ಕಾಯ್ದೆಯನ್ನು ಶೀಘ್ರವೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com