594ರನ್ ಗಳ ಜೊತೆಯಾಟ, ರಣಜಿಯಲ್ಲಿ ಮಹಾ ದಾಖಲೆ ಬರೆದ ಮಹಾರಾಷ್ಟ್ರ ಕ್ರಿಕೆಟಿಗರು

ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ ಅವರು ಶುಕ್ರವಾರ 594ರನ್ ಗಳ ಜೊತೆಯಾಟವಾಡುವ ಮೂಲಕ ರಣಜಿಯಲ್ಲಿ...
ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ
ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ
ಮುಂಬೈ: ಮಹಾರಾಷ್ಟ್ರದ ಸ್ವಪ್ನಿಲ್ ಗುಗಲೆ ಹಾಗೂ ಅಂಕಿತ್ ಬಾವ್ನೆ ಅವರು ಶುಕ್ರವಾರ 594ರನ್ ಗಳ ಜೊತೆಯಾಟವಾಡುವ ಮೂಲಕ ರಣಜಿಯಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. 
ಇಂದು ವಾಂಖೆಡೆ ಸ್ಟೇಡಿಯಂನಲ್ಲಿ ಮಹಾರಾಷ್ಟ್ರದ ಈ ಯುವ ಆಟಗಾರರು ದೆಹಲಿ ವಿರುದ್ಧ 3ನೇ ವಿಕೆಟ್ ಗೆ 594ರನ್ ಜೊತೆಯಾಟ ಸಾಧಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಭಾರತೀಯ ಆಟಗಾರರು ಸಾಧಿಸಿದ ಅತಿ ದೊಡ್ಡ ಜೊತೆಯಾಟವಾಗಿದೆ.
ನಾಯಕ ಹಾಗೂ ಆರಂಭಿಕ ಆಟಗಾರ 25 ವರ್ಷ ವಯಸ್ಸಿನ ಗುಗಲೆ ಅವರು ಅಜೇಯ 351ರನ್ (521 ಎಸೆತಗಲು, 37 ಬೌಂಡರಿ, 5 ಸಿಕ್ಸ್) ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ 23 ವರ್ಷದ ಬಾವ್ನೆ 258 ರನ್ (500 ಎಸೆತಗಳು, 18 ಬೌಂಡರಿ, ಎರಡು ಸಿಕ್ಸ್) ಗಳಿಸಿದರು. 
ಈ ಹಿಂದೆ 2006ರಲ್ಲಿ  ಶ್ರೀಲಂಕಾದ ಮಹೇಲ ಜಯವರ್ದನೆ ಹಾಗೂ ಕುಮಾರ್ ಸಂಗಕ್ಕಾರ ಅವರು ಕೊಲೊಂಬೊದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 624ರನ್ ಗಳ ಜೊತೆಯಾಟ ಸಾಧಿಸಿ ವಿಶ್ವ ದಾಖಲೆ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com