ರೇಡಿಯೋ ಜಾಕಿ ಬಾಲಾಜಿ-ಶೋಯಬ್ ಅಖ್ತರ್
ಕ್ರಿಕೆಟ್
ಆರ್‌ಜೆ ಬಾಲಾಜಿ ನೀವು ಶೋಯಬ್ ಅಖ್ತರ್ ಗೆ ಸಿಡಿಸಿದ ಸಿಕ್ಸರ್ ಅವಿಸ್ಮರಣೀಯ
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವುದು ಸಾಮಾನ್ಯ. ಅಂತೆ ಇಲ್ಲೊಬ್ಬ ಅಭಿಮಾನಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ...
ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಬ್ಬರನ್ನೊಬ್ಬರು ಕಾಲೆಳೆದುಕೊಳ್ಳುವುದು ಸಾಮಾನ್ಯ. ಅಂತೆ ಇಲ್ಲೊಬ್ಬ ಅಭಿಮಾನಿ ಪ್ರಥಮ ದರ್ಜೆ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ಲಕ್ಷ್ಮೀಪತಿ ಬಾಲಾಜಿಗೆ ಅಭಿಮಾನದ ಟ್ವೀಟ್ ಮಾಡುವ ಭರದಲ್ಲಿ ಆರ್ ಜೆ ಬಾಲಾಜಿಗೆ ಟ್ವೀಟ್ ಮಾಡಿ ನಗೆಗೀಡಾದ ಪ್ರಸಂಗ ನಡೆಸಿದೆ.
ಪ್ರಭಾತ್ ಕುಮಾರ್ ಸಾಹು: ಟ್ವೀಟ್ ನಲ್ಲಿ ಲಕ್ಷ್ಮೀಪತಿ ಬಾಲಾಜಿ ಎಂದು ತಿಳಿದು ಆರ್ ಜೆ ಬಾಲಾಜಿಗೆ ಸಾರ್ ನೀವು ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್ ಗೆ ಹೊಡೆದ ಸಿಕ್ಸ್ ಅನ್ನು ಮರೆಯಲಾಗದ್ದು, ಈಗಲು ನಿಮ್ಮ ಆ ಭರ್ಜರಿ ಹೊಡೆಯವನ್ನು ನೆನಪು ಮಾಡಿಕೊಳ್ಳುವೆ ಎಂದು ಟ್ವೀಟಿಸಿದ್ದಾನೆ.
ಆರ್ ಜೆ ಬಾಲಾಜಿ: ಅಭಿಮಾನಿಯ ಕಾಲೆಳೆಯುವ ಸಲುವಾಗಿ ಹೌದು ಈ ಸಿಕ್ಸ್ ಹೊಡೆದಿದ್ದು ನಾನೇ. ಅದು ಸೂಪರ್ ಶಾಟ್ ಆಗಿತ್ತು. ನಾನು ಅದನ್ನು ನೆನಪಿಸಿಕೊಳ್ಳುವೆ.. ಈ ಎಲ್ಲಾ ಕೀರ್ತಿ ನಿಮಗೆ ಸೇರಬೇಕು ಎಂದು ಟ್ವೀಟಿಸಿದ್ದಾರೆ.
ಪ್ರಭಾತ್ ಕುಮಾರ್ ಸಾಹು: ಸಿಕ್ಸ್ ಹೊಡೆದ ನಂತರದ ಎಸೆತದಲ್ಲಿ ನಿಮ್ಮ ಬ್ಯಾಟ್ ಮುರಿದುಹೋಗಿತ್ತು ಅಲ್ವಾ ಎಂದು ಟ್ವೀಟಿಸಿದ್ದಾನೆ.
ಆರ್ ಜೆ ಬಾಲಾಜಿ: ಇದರಲ್ಲಿ ಅದು ಬೇರೆಯಾ... ಹೌದು ಸಾಹು. ಮುರಿದ ಬ್ಯಾಟನ್ನು ಸರ್ವಿಸ್ ಮಾಡಿಸಲು ಆದ್ಯಾರ್ ಸ್ಪೋರ್ಟ್ ಗೆ ಕೊಟ್ಟಿದ್ದೇನೆ.
ಪ್ರಭಾತ್ ಕುಮಾರ್ ಸಾಹು: ಕ್ಷಮಿಸಿ. ತಪ್ಪಾಗಿ ತಿಳಿದು ನಿಮಗೆ ಟ್ವೀಟ್ ಮಾಡಿದೆ.
ಆರ್ ಜೆ ಬಾಲಾಜಿ: ಸಮಸ್ಯೆ ಏನು ಇಲ್ಲ ಬಿಡು. ನಾನು ತಮಾಷೆ ಮಾಡಿದೆ. ಧನ್ಯವಾದ. ಮತ್ತೆ ಎಸ್ ಜೆ ಸೂರ್ಯಾ ಅವರಿಗೆ ವಿಶ್ ಮಾಡುವುದನ್ನು ಮರೆಯಬೇಡ ಎಂದು ಟ್ವೀಟಿಸಿದ್ದಾರೆ.


