ಮೆಲ್ಬೋರ್ನ್(ಆಸ್ಟ್ರೇಲಿಯಾ): ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ರಿಂದ ನಾನು ನಿದ್ರಾರಹಿತ ದಿನಗಳನ್ನು ಕಳೆದಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಬೌಲರ್ ಎಂದರೇ ಅವರು ಮುತ್ತಯ್ಯ ಮುರಳಿಧರನ್. ಅವರು ಕೇವಲ ಸ್ಪಿನ್ ಬೌಲರ್ ಎಂದು ಭಾವಿಸಿದ್ದೇ ಆದರೆ ಅವರ ಮಾರಕ ಬೌಲಿಂಗ್ ದಾಳಿಯಿಂದಾಗಿ ನಾನು ಹಲವು ರಾತ್ರಿಗಳನ್ನು ನಿದ್ರೆಯಿಲ್ಲದೆ ಕಳೆದಿದ್ದೇನೆ ಎಂದು ಹೇಳಿದ್ದಾರೆ.
ಮುತ್ತಯ್ಯ ಮುರಳಿಧರನ್ ಬೌಲಿಂಗ್ ಶೈಲಿ ನಿಜಕ್ಕೂ ಅಸಾಮಾನ್ಯ. ಅವರೊಬ್ಬ ಜಾದೂಗಾರ. ಅವರು ಅಫ್ ಸ್ಪಿನ್ನರ್ ಆದರೆ ಅವರ ಬೌಲಿಂಗ್ ಶೈಲಿ ಅವರು ಲೆಗ್ ಸ್ಪಿನ್ನರ್ ಎಂಬಂತ ಭಾಸವಾಗುತ್ತದೆ. ಇದರಿಂದಾಗಿ ಅವರ ಎಸೆತಗಳನ್ನು ಎದುರಿಸಲು ಒದ್ದಾಡುತ್ತಿದ್ದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್ ಅವರು ಶ್ರೀಲಂಕಾ ವಿರುದ್ಧ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಕಳಪೆ 35.85 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಕಾರಣ ಮುತ್ತಯ್ಯ ಮುರುಳಿಧರನ್ ಮಾರಕ ಬೌಲಿಂಗ್ ಎಂದು ಖಾಸಗಿ ವೆಬ್ ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.