ಬಾಲಿವುಡ್ ನಟಿ ಸಾಗರಿಕಾ ಜೊತೆ ಕ್ರಿಕೆಟಿಗ ಜಹೀರ್ ಖಾನ್ ನಿಶ್ಚಿತಾರ್ಥ

ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರ ನಿಶ್ಚಿತಾರ್ಥವು ನೆರವೇರಿದೆ. ಈ ವಿಷಯವನ್ನು ಜಹೀರ್ ಟ್ವಿಟರ್ ...
ಜಹೀರ್ ಖಾನ್
ಜಹೀರ್ ಖಾನ್
Updated on
ನವದೆಹಲಿ: ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟಗೆ ಅವರ ನಿಶ್ಚಿತಾರ್ಥವು  ನೆರವೇರಿದೆ. ಈ ವಿಷಯವನ್ನು ಜಹೀರ್ ಟ್ವಿಟರ್ ಮೂಲಕ ಬಹಿರಂಗಗೊಳಿಸಿದ್ದಾರೆ. 
ಸಾಗರಿಕಾ ಅವರು ‘ಚಕ್‌ ದೇ ಇಂಡಿಯಾ’ ಹಿಂದಿ ಸಿನಿಮಾದಲ್ಲಿ ನಟಿಸಿದ್ದರು.ಜಹೀರ್ ಮತ್ತು ಸಾಗರಿಕಾ ಅವರು ಬಹುಕಾಲದ ಸ್ನೇಹಿತರಾಗಿದ್ದರು. 38 ವರ್ಷದ ಜಹೀರ್ ಪ್ರಥಮದರ್ಜೆ ಕ್ರಿಕೆಟ್‌ನಿಂದ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದರು.
ನಿಮ್ಮ ಪತ್ನಿಯ ಆಯ್ಕೆಗೆ ನಗಬೇಡಿ. ನೀವೂ ಅದರಲ್ಲೊಬ್ಬರಾಗಿರುತ್ತೀರಿ. ಪಾರ್ಟ್ನರ್ ಫಾರ್ ಲೈಫ್ # ಎಂಗೇಜ್ಡ್  ಎಂದು 38 ವರ್ಷದ ಜಹೀರ್ ನಿಶ್ಚಿತಾರ್ಥವನ್ನು ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ. ಸಾಗರಿಕಾ ಎಂಗೇಜ್​ವೆುಂಟ್ ರಿಂಗ್ ಪ್ರದರ್ಶಿಸುತ್ತಿರುವ ಮತ್ತು ಇಬ್ಬರೂ ಜತೆಯಾಗಿ ಪೋಸ್ ನೀಡಿರುವ ಚಿತ್ರವನ್ನೂ ಜಹೀರ್ ಪ್ರಕಟಿಸಿದ್ದಾರೆ.
ಶಾರುಖ್ ಖಾನ್ ನಟನೆಯ ‘ಚಕ್​ದೇ ಇಂಡಿಯಾ’ ಸಿನಿಮಾದಲ್ಲಿ ಹಾಕಿ ಆಟಗಾರ್ತಿಯಾಗಿ ನಟಿಸುವ ಮೂಲಕ 2007ರಲ್ಲಿ ಚಿತ್ರರಂಗ ಪ್ರವೇಶಿಸಿದ್ದರು. 31 ವರ್ಷದ ಸಾಗರಿಕಾ ಕೆಲ ಮರಾಠಿ, ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.ಅವರು ರಾಷ್ಟ್ರಮಟ್ಟದ ಮಾಜಿ ಅಥ್ಲೀಟ್ ಕೂಡ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com