'ಕಮ್ಯೂನಿಟಿ ಕಿಚನ್' ಕ್ಯಾಂಟಿನ್ ತೆರೆದ ಗೌತಮ್ ಗಂಭೀರ್, ಇಲ್ಲಿ ಎಲ್ಲವೂ ಉಚಿತ!

ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಅವರು 'ಕಮ್ಯೂನಿಟಿ ಕಿಚನ್' ಕ್ಯಾಂಟಿನ್ ತೆರೆದು ಅದರಲ್ಲಿ ಬಡವರಿಗೆ ಉಚಿತ ಆಹಾರವನ್ನು ನೀಡುತ್ತಿದ್ದು ಬಡವರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ.
ಗೌತಮ್ ಗಂಭೀರ್
ಗೌತಮ್ ಗಂಭೀರ್
ನವದೆಹಲಿ: ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಅವರು 'ಕಮ್ಯೂನಿಟಿ ಕಿಚನ್' ಕ್ಯಾಂಟಿನ್ ತೆರೆದು ಅದರಲ್ಲಿ ಬಡವರಿಗೆ ಉಚಿತ ಆಹಾರವನ್ನು ನೀಡುತ್ತಿದ್ದು ಬಡವರ ಹಸಿವನ್ನು ನೀಗಿಸಲು ಮುಂದಾಗಿದ್ದಾರೆ. 
ರಾಷ್ಟ್ರ ರಾಜಧಾನಿ ದೆಹಲಿಯ ಪಟೇಲ್ ನಗರದಲ್ಲಿ ಗಂಭೀರ್ ಕ್ಯಾಂಟಿನ್ ತೆರೆದಿದ್ದು ಇಲ್ಲಿ ಉಚಿತವಾಗಿ ಆಹಾರ ನೀಡಲಾಗುತ್ತದೆ. ತಮ್ಮ ಹುಟ್ಟೂರಿನ ಬಡ ಜನರ ಹಸಿವನ್ನು ನೀಗಿಸಲು ಗಂಭೀರ ಈ ಕ್ಯಾಂಟಿನ್ ಅನ್ನು ತೆರೆದಿದ್ದಾರೆ. 
ಗೌತಮ್ ಗಂಭೀರ್ ಫೌಂಡೆಷನ್ ವತಿಯಿಂದ ಜುಲೈ 31ರಿಂದ ಈ ಕ್ಯಾಂಟಿನ್ ಓಪನ್ ಮಾಡಲಾಗಿದ್ದು ದಿನಂ ಪ್ರತಿ ಬಡ ಜನರಿಗೆ ಉಚಿತ ಆಹಾರ ನೀಡಲಾಗುತ್ತಿದೆ. ಕ್ರಿಕೆಟ್ ಬದುಕಿನಲ್ಲಿ ತಾವು ದುಡಿದ ಹಣವನ್ನು ಬಡ ಜನರಿಗಾಗಿ ಖರ್ಚು ಮಾಡಲು ಗಂಭೀರ್ ತೀರ್ಮಾನಿಸಿದ್ದಾರೆ.
ಗಂಭೀರ್ ಅವರ ಈ ಕಾರ್ಯಕ್ಕೆ ದೇಶಾದ್ಯಂತ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ರಾಜಕೀಯ ಉದ್ದೇಶಕ್ಕಾಗಿ ಕರ್ನಾಟಕದಲ್ಲಿ ಕ್ಯಾಂಟಿನ್ ತೆರೆಯಲು ಮುಂದಾಗಿರುವ ಕಾಂಗ್ರೆಸ್ ಇಂದಿರಾ ಗಾಂಧಿ ಹೆಸರಿನಲ್ಲಿ ಕ್ಯಾಂಟಿನ್ ತೆರೆಯುತ್ತಿದೆ. ಇನ್ನು ಜೆಡಿಎಸ್ ಅಪ್ಪಾಜಿ ಕ್ಯಾಂಟಿನ್ ತೆರೆದಿದ್ದು ಇಲ್ಲಿ ಕಾಸಿಗೆ ಊಟ ನೀಡಲಾಗುತ್ತದೆ. ಆದರೆ ಯಾವುದೇ ದುರುದ್ದೇಶವಿಲ್ಲದೆ ಗಂಭೀರ್ ಮಾನವೀಯತೆಯ ಆಧಾರದ ಮೇಲೆ ಕ್ಯಾಂಟಿನ್ ತೆರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com