ಕೊಲಂಬೋ: ಅತ್ಯಂತ ವೇಗವಾಗಿ 150 ವಿಕೆಟ್ ಗಳನ್ನು ಗಳಿಸಿದ 2 ನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ. ತಂಡದ ಸಹ ಆಟಗಾರ ರವಿಚಂದ್ರನ್ ಅಶ್ವಿನ್ ಅವರ ಹಿಂದಿನ ಸ್ಥಾನದಲ್ಲಿರುವ ರವೀಂದ್ರ ಜಡೇಜಾ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಧನಂಜಯ್ ಡೇ ಸಿಲ್ವಾ ವಿಕೆಟ್ ಪಡೆಯುವ ಮೂಲಕ ಅತ್ಯಂತ ವೇಗವಾಗಿ 150 ವಿಕೆಟ್ ಗಳನ್ನು ಗಳಿಸಿದ 2 ನೇ ಭಾರತೀಯ ಬೌಲರ್ ಎನಿಸಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾದ ಮೊದಲ ಇನ್ನಿಂಗ್ಸ್ ನಲ್ಲಿ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ ಈ ಸಾಧನೆ ಮಾಡಿದ್ದಾರೆ. ಜಡೇಜಾ ಈ ವರೆಗೂ 32 ಪಂದ್ಯಗಳನ್ನಾಡಿದ್ದು, 150 ವಿಕೆಟ್ ಗಳಿಸಿದ್ದಾರೆ. ಆರ್ ಅಶ್ವಿನ್ ಈ ವರೆಗೂ 29 ಪಂದ್ಯಗಳನ್ನಾಡಿದ್ದಾರೆ.
ಇ ಪ್ರಸನ್ನ ಹಾಗೂ ಅನಿಲ್ ಕುಂಬ್ಳೆ 34 ಪಂದ್ಯಗಳನ್ನಾಡಿದ್ದು 150 ವಿಕೆಟ್ ಗಳನ್ನು ಪಡೆದಿದ್ದರೆ, ಹರ್ಭಜನ್ ಸಿಂಗ್ 35 ಪಂದ್ಯಗಳಲ್ಲಿ 150 ವಿಕೆಟ್ ಗಳನ್ನು ಪಡೆದಿದ್ದಾರೆ.