ಶ್ರೀನಗರದಲ್ಲಿ 'ಭಾರತ್ ಮಾತಾ ಕೀ ಜೈ' ಘೋಷಣೆ ಕೂಗಿದ ಕಾಶ್ಮೀರ ಪಂಡಿತ ಮಹಿಳೆ: ಸುರೇಶ್ ರೈನಾ ಸೆಲ್ಯೂಟ್

ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ...
ಸುರೇಶ್ ರೈನಾ
ಸುರೇಶ್ ರೈನಾ
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನೆಗಳಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್ ವಾತಾವಾರಣ ನಿರ್ಮಾಣವಾಗಿತ್ತು. 
ಇದೇ ವೇಳೆ ಶ್ರೀನಗರದ ಲಾಲ್ ಚೌಕ್ ಬಳಿ  ಒಂದು ಅತ್ಯದ್ಬುತ ಎನ್ನುವ ಘಟನೆ ನಡೆದಿತ್ತು. ಕಾಶ್ಮೀರ ಪಂಡಿತ ಮಹಿಳೆ ಖಾಲಿ ಹೊಡೆಯುತ್ತಿದ್ದ ರಸ್ತೆಯಲ್ಲಿ ನಿಂತು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಾರೆ.
ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಲವೆಡೆ ನಿರ್ಬಂಧ ಹೇರಲಾಗಿತ್ತು. ಪ್ರತ್ಯೇಕತಾವಾದಿಗಳು ಬಂದ್ ಗೆ ಕರೆ ನೀಡಿದ್ದರು. ಇಂಥಹ ಸಮಯದಲ್ಲಿ ಧೈರ್ಯದಿಂದ ರಸ್ತೆಗೆ ಬಂದ ಮಹಿಳೆ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ನೀನು ಭಾರತದಿಂದ ಬಂದಿದ್ದೇ ಆದರೇ ಭಾರತ್ ಮಾತಾ ಕೀ ಜೈ ಎಂದು ಕೂಗುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಮಹಿಳೆಯ ಧೈರ್ಯಕ್ಕೆ ಮೆಚ್ಚಿರುವ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಆಕೆಯನ್ನು ಹೊಗಳಿ ವಿಡಿಯೋ ಶೇರ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com