ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಜನ್ಮ ದಿನದ ಸಂಭ್ರಮ

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ, ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿರುವ ಮಿಥಾಲಿ ರಾಜ್ ಗೆ ಇಂದು ಜನುಮ ದಿನದ ಸಂಭ್ರಮ.
ಮಿಥಾಲಿ ರಾಜ್
ಮಿಥಾಲಿ ರಾಜ್
ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ, ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿರುವ ಮಿಥಾಲಿ ರಾಜ್ ಗೆ ಇಂದು ಜನುಮ ದಿನದ ಸಂಭ್ರಮ. ಮಿಥಾಲಿ ಇಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಹದಿನಾರನೇ ವರ್ಷಕ್ಕೆ ಕ್ರಿಕೆಟ್ ಜೀವನಕ್ಕೆ ಅಡಿ ಇಟ್ಟ ಮಿಥಾಲಿ ರಾಷ್ಟ್ರಕ್ಕಾಗಿ ಒಟ್ಟು 18 ವರ್ಷ ಆಟವಾಡಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 6,000 ರನ್ ಗಡಿದಾಟಿದ ಏಕೈಕ ಮಹಿಳಾ ಕ್ರಿಕೆಟರ್ ಮಿಥಾಲಿ ರಾಜ್ ಆಗಿದ್ದಾರೆ.
ಮಹಿಳಾ ಕ್ರಿಕೆಟ್ ಕುರಿತು ಭಾರತದ ದೃಷ್ಟಿಕೋನವು ಬದಲಾಗುವಂತೆ ಮಾಡಿದ ಕೀರ್ತಿ ಮಿಥಾಲಿಗೆ ಸಲ್ಲಬೇಕು. ಮಿಥಾಲಿ ರಾಜ್ ಬಾರತ ತಂಡವನ್ನು 2017 ರ ಮಹಿಳಾ ವಿಶ್ವ ಕಪ್ ಕ್ರಿಕೆಟ್ ಸರಣಿಯಲ್ಲಿ ಫೈನಲ್ ಹಂತಕ್ಕೆ ಕೊಂಡೊಯ್ಯುವ ಮುಖೇನ ಶತಕೋಟಿ ಬಾರತೀಯರ ಮನ ಗೆದ್ದಿದ್ದರು.
ಇಂತಹಾ ಿಅಪೂರ್ವ ಸಾಧಕಿ ಮಿಥಾಲಿ ಅವರಿಗೆ ಬಿಸಿಸಿಐ ಹಾಗೂ ಐಸಿಸಿ ಜನ್ಮ ದಿನದ ಶುಭಾಶಯ ಕೋರಿ ಟ್ವೀಟ್ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com