ಕೊಲಂಬೊ: ಶ್ರೀಲಂಕಾದ ಯುವ ಆಟಗಾರನೊಬ್ಬ ಕ್ರಿಕೆಟ್ ಪಂದ್ಯವೊಂದರ ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾನೆ.
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳಿಧರನ್ ಹೆಸರಿನಲ್ಲಿ ನಡೆಯುತ್ತಿರುವ ಗುಡ್ ನೆಸ್ ಕಪ್ ನ ಮೊದಲ ಆವೃತ್ತಿಯ ಟೂರ್ನಿಯಲ್ಲಿ ಎಫ್ಒಜಿ ತಂಡದ ಪರ ಆಡಿದ್ದ ನವಿಂದು ಪಹಸರ ಈ ದಾಖಲೆ ಮಾಡಿದ್ದಾರೆ.
ನೋಬಾಲ್ ಸಹಾಯದಿಂದ ನವಿಂದು ಪಹಸರ ಈ ದಾಖಲೆ ಮಾಡಿದ್ದಾನೆ. ಹೌದು ಒಂದು ಓವರ್ ನಲ್ಲಿ ನೋಬಾಲ್ ಸಹಿತ ಏಳು ಎಸೆತಗಳನ್ನು ಎದುರಿಸಿದ ನವಿಂದು ಏಳು ಎಸೆತಗಳನ್ನು ಸಿಕ್ಸರ್ ಬಾರಿಸಿ ಈ ದಾಖಲೆ ಮಾಡಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಸಿಡಿಸಿದ ವಿಶ್ವದಾಖಲೆ ಹೊಂದಿದ್ದಾರೆ.