ನಾನು ಮತ್ತೆ ಯಾವಾಗ ಭಾರತ ತಂಡದ ನಾಯಕನಾಗುತ್ತೇನೊ ಗೊತ್ತಿಲ್ಲ: ರೋಹಿತ್ ಶರ್ಮಾ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ನಾನು ಮತ್ತೆ ಯಾವಾಗ ಭಾರತ ತಂಡದ ನಾಯಕನಾಗುತ್ತೇನೊ ಗೊತ್ತಿಲ್ಲ ಎಂದು...
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಇಂದೋರ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಅವರು ನಾನು ಮತ್ತೆ ಯಾವಾಗ ಭಾರತ ತಂಡದ ನಾಯಕನಾಗುತ್ತೇನೊ ಗೊತ್ತಿಲ್ಲ ಎಂದು ನೋವಿನಿಂದ ಹೇಳಿಕೊಂಡಿದ್ದಾರೆ. 
ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ನಾಳೆ ನಡೆಯಲಿದ್ದು ನಾಳಿನ ಪಂದ್ಯ ರೋಹಿತ್ ಶರ್ಮಾರ ನಾಯಕತ್ವದ ಕೊನೆಯ ಪಂದ್ಯವಾಗಿದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಈ ರೀತಿ ಹೇಳಿದ್ದಾರೆ. 
ನಾನು ಇದೇ ಮೊದಲ ಬಾರಿಗೆ ತಂಡವನ್ನು ಮುನ್ನಡೆಸುತ್ತಿದ್ದೇನೆ. ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ ಒತ್ತಡವಿದೆ ಹಾಗೂ ಇದೇ ನನ್ನ ಕೊನೆಯ ನಾಯಕತ್ವದ ಪಂದ್ಯ ಸಹ ಇದಾಗಲಿದ್ದು ಮೈದಾನದಲ್ಲಿ ನಾನು ಕಳೆಯುವ ಪ್ರತಿಯೊಂದು ನಿಮಿಷವೂ ನನಗೆ ಹೆಚ್ಚು ಮಹತ್ವದ್ದು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. 
ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರಬಹದು. ಆದರೆ ಶತಕೋಟಿ ಭಾರತೀಯರು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ರಾಷ್ಟ್ರೀಯ ತಂಡವನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುದು ನನಗೆ ಮನವರಿಕೆಯಾಗದೆ ಎಂದರು. 
ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಳ್ಳುತ್ತಿದ್ದು ಆಫ್ರಿಕಾ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com