ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮತ್ತೊಮ್ಮೆ ಮತಾಂಧರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೊಹಮ್ಮದ್ ಕೈಫ್ ಸಾಂತ ಕ್ಲಾಸ್ ಟೋಪಿ ಧರಿಸಿ ಕುಟುಂಬ ಸಮೇತ ಕ್ರಿಸ್ ಮಸ್ ಹಬ್ಬಕ್ಕಾಗಿ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಶುಭಾಶಯ ಕೋರಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರು ಧರ್ಮ ವಿರೋಧಿ ಎಂಬ ಟೀಕೆಗೆ ಗುರಿಯಾಗಿದ್ದಾರೆ.
ಈ ಪೋಸ್ಟ್ ಗೆ ಹಲವರು ಕಮೆಂಟ್ ಗಳ ಮೂಲಕ ಅನ್-ಇಸ್ಲಾಮಿಕ್ ಎಂದು ಕರೆದಿದ್ದಾರೆ.
ತಮ್ಮ ಪೋಸ್ಟ್ ನಲ್ಲಿ ಕುಟುಂಬದ ಜತೆ ಕ್ರಿಸ್ ಮಸ್ ಆಚರಿಸಿಕೊಂಡ ಚಿತ್ರದ ಜತೆಗೆ ಅವರು ಮೇರಿ ಕ್ರಿಸ್ ಮಸ್! ಮೇರಿ ಕ್ರಿಸ್ ಮಸ್! ಶಾಂತಿ ಮತ್ತು ಪ್ರೀತಿ ಇರಲಿ ಎಂದು ಸಂದೇಶ ಬರೆದಿದ್ದರು.
ಮೊಹಮ್ಮದ್ ಕೈಫ್ ವಿರುದ್ಧ ಮತಾಂಧರು ಕಿಡಿಕಾರಿದ್ದು ಇದೇ ಮೊದಲೇನಲ್ಲ ಈ ಹಿಂದೆ ಚೆಸ್ ಆಡುತ್ತಿದ್ದ ಮತ್ತು ಸೂರ್ಯ ನಮಸ್ಕಾರ ಮಾಡುತ್ತಿದ್ದ ಚಿತ್ರವನ್ನು ಪೋಸ್ಟ್ ಮಾಡಿದಾಗಲೂ ಧರ್ಮ ವಿರೋಧಿ ಎಂಬ ಟೀಕೆಗೆ ಗುರಿಯಾಗಿದ್ದರು.