ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿ ದಾಖಲೆ ಬರೆದ ಉಮರ್ ಅಕ್ಮಲ್

ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರ ಉಮರ್ ಅಕ್ಮಲ್ ಟಿ20 ಕ್ರಿಕೆಟ್ ನ ಇತಿಹಾಸದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಉಮರ್ ಅಕ್ಮಲ್
ಉಮರ್ ಅಕ್ಮಲ್
ಕರಾಚಿ(ಪಾಕಿಸ್ತಾನ): ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರ ಉಮರ್ ಅಕ್ಮಲ್ ಟಿ20 ಕ್ರಿಕೆಟ್ ನ ಇತಿಹಾಸದಲ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.
ಉಮರ್ ಅಕ್ಮಲ್ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಭಾರೀ ಶೂನ್ಯಕ್ಕೆ ಔಟಾಗಿರುವ ಏಕೈಕ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಮತ್ತು ವೆಸ್ಟ್ ಇಂಡೀಸ್ ನ ಡ್ವೈನ್ ಸ್ಮಿತ್ ಮೂವರು 23 ಬಾರಿ ಶೂನ್ಯಕ್ಕೆ ಔಟಾಗಿದ್ದು 24 ಬಾರಿ ಶೂನ್ಯಕ್ಕೆ ಔಟಾಗುವ ಮೂಲಕ ಉಮರ್ ಅಕ್ಮಲ್ ಈ ಸಾಧನೆ ಮಾಡಿದ್ದಾರೆ. 
ದುಬೈನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ನಲ್ಲಿ ಲಾಹೋರ್ ಕ್ವಾಲಂಡರ್ಸ್ ಪರ ಆಡುತ್ತಿರುವ 26 ವರ್ಷದ ಉಮರ್ ಅಕ್ಮಲ್ ಪೇಶಾವರ್ ಜಲ್ಮಿ ಪರ ವೇಗಿ ಹಸನ್ ಅಲಿ ಎಸೆತದಲ್ಲಿ ಮೊಹಮ್ಮದ್ ಹಫೀಜ್ ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಟಿ20 ಕ್ರಿಕೆಟ್ ನಲ್ಲಿ 24ನೇ ಬಾರಿಗೆ ಶೂನ್ಯಕ್ಕೆ ಔಟಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com