ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ವೇಗಿ ಮಿಚೆಲ್ ಸ್ಟಾರ್ಕ್ 2017ರ ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ.
2017ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಹರಾಜು ಪ್ರಕ್ರಿಯೆಗೆ ಒಂದು ದಿನ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್ ಆರ್‌ಸಿಬಿ ತಂಡಕ್ಕೆ ಆಘಾತ ನೀಡಿದ್ದಾರೆ.
ಫೆಬ್ರವರಿ 23ರಿಂದ ಆಸ್ಟ್ರೇಲಿಯಾ ಭಾರತ ಪ್ರವಾಸ ಕೈಗೊಳ್ಳಲಿದ್ದು ಭಾರತ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆಸೀಸ್ ತಂಡದ ಬೌಲಿಂಗ್ ನೇತೃತ್ವ ವಹಿಸಿಕೊಂಡಿರುವ ಸ್ಟಾರ್ಕ್ ಈ ಹಿಂದೆ 2014, 2015ರಲ್ಲಿ ಆರ್‌ಸಿಬಿ ತಂಡದ ಪರ ಆಡಿದ್ದರು.
ಆದರೆ 2016ರ ಐಪಿಎಲ್ ಟೂರ್ನಿಯಲ್ಲಿ ಕಾಲಿನ ಗಾಯದಿಂದಾಗಿ ತಂಡದಿಂದ ದೂರ ಉಳಿದಿದ್ದರು. ಮಿಚೆಲ್ ಸ್ಟಾರ್ಕ್ ಗೆ ಆರ್‌ಸಿಬಿ 5 ಕೋಟಿ ರುಪಾಯಿ ಬಿಡ್ ಮಾಡಿ ಖರೀದಿಸಿತ್ತು. ಇದೀಗ ಆರ್‌ಸಿಬಿ ಖಾತೆಗೆ ಹೆಚ್ಚುವರಿ 5 ಕೋಟಿ ರುಪಾಯಿ ಉಳಿದಿದ್ದು ಬೇರೆ ವಿದೇಶಿ ಆಟಗಾರನನ್ನು ಖರೀದಿಸಲು ಅವಕಾಶ ಸಿಕ್ಕಂತಾಗಿದೆ.