ಗುರ್‌ಮೆಹರ್ ಕೌರ್ ಅಭಿಪ್ರಾಯವನ್ನು ಅಪಹಾಸ್ಯ ಮಾಡುತ್ತಿರುವುದು ತುಚ್ಛತೆಯನ್ನು ತೋರುತ್ತಿದೆ: ಗಂಭೀರ್

ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾವನಲ್ಲ, ಯುದ್ಧ ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾಗಿದ್ದ ಗುರ್‌ಮೆಹರ್ ಕೌರ್‌ಗೆ ಟೀಂ ಇಂಡಿಯಾದ ಆಟಗಾರ ಗೌತಮ್...
ಗುರ್‌ಮೆಹರ್ ಕೌರ್‌, ಗೌತಮ್ ಗಂಭೀರ್
ಗುರ್‌ಮೆಹರ್ ಕೌರ್‌, ಗೌತಮ್ ಗಂಭೀರ್
ನವದೆಹಲಿ: ನನ್ನ ತಂದೆಯನ್ನು ಕೊಲೆ ಮಾಡಿದ್ದು ಪಾಕಿಸ್ತಾವನಲ್ಲ, ಯುದ್ಧ ಎಂದು ಹೇಳಿ ತೀವ್ರ ಟೀಕೆಗೆ ಗುರಿಯಾಗಿದ್ದ ಗುರ್‌ಮೆಹರ್ ಕೌರ್‌ಗೆ ಟೀಂ ಇಂಡಿಯಾದ ಆಟಗಾರ ಗೌತಮ್ ಗಂಭೀರ್ ಬೆಂಬಲ ನೀಡಿದ್ದಾರೆ. 
ದೆಹಲಿಯ ಶ್ರೀರಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿ ಗುರ್‌ಮೆಹರ್ ಕೌರ್‌ ರಾಮ್‌ಜಾಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಸಂಭವಿಸಿದ ನಂತರ ನಾನು ಎಬಿವಿಪಿಗೆ ಹೆದರುವುದಿಲ್ಲ ಎಂಬ ಅಭಿಯಾನ ಆರಂಭಿಸಿದ್ದರು. ಗುರ್‌ಮೆಹರ್ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಕೆಲವು ಸೆಲೆಬ್ರಿಟಿಗಳು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. 
ಇದಕ್ಕೆ ಸಂಬಂಧಿಸಿದಂತೆ ಗೌತಮ್ ಗಂಭೀರ್, ದೇಶದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯ ವ್ಯಕ್ತಪಡಿಸುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲರಿಗೂ ಇದೆ. ನಮ್ಮ ಜೀವನದಲ್ಲಿ ಹೆಚ್ಚಿನ ಸಮಯ ನಾವು ಕಲಿತ್ತಿದ್ದನ್ನು ವ್ಯಕ್ತಪಡಿಸುವುದು ಪ್ರತಿಯೊಂದು ಕ್ಷೇತ್ರದಲ್ಲೂ ದೈನಂದಿನ ಅಭ್ಯಾಸವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಗುರ್‌ಮೆಹರ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಭಾರತೀಯ ಸೇನೆಯನ್ನು ಗೌರವಿಸಿ, ಅವರ ಸೇವೆಗೆ ನಾವು ಶಿರಭಾಗಿ ನಮಸ್ಕರಿಸಬೇಕು ಎಂಬುದೊಂದು ವಿಡಿಯೋವೊಂದನ್ನು ಟ್ವೀಟರ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ 32 ವರ್ಷ ಗೌತಮ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವವರನ್ನು ಅಪಹಾಸ್ಯ ಮಾಡುತ್ತಾ ತುಚ್ಛವಾಗಿ ಕಾಣಬೇಡಿ ಎಂದು ಹೇಳಿದ್ದಾರೆ.
ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಗುರ್‌ಮೆಹರ್ ಸಂದೇಶಕ್ಕೆ ಪ್ರತಿಯಾಗಿ, ಎರಡು ಬಾರಿ ತ್ರಿಶತಕ ಬಾರಿಸಿದ್ದು ನಾನಲ್ಲ, ನನ್ನ ಬ್ಯಾಟ್ ಎಂದು ಅಣಕಿಸುವ ಸಂದೇಶ ಟ್ವೀಟರ್ ಮೂಲಕ ಹರಿಬಿಟ್ಟಿದ್ದರು. ಇದರ ಬೆನ್ನಲ್ಲೇ ಬಲಿಂಪಿಕ್ ಪದಕ ವಿಜೇತ ಯೋಗೇಶ್ವರ ದತ್ ಅಡಾಲ್ಫ್ ಹಿಟ್ಲರ್, ಒಸಾಮ ಬಿನ್ ಲಾಡೆನ್ ಮತ್ತು ಕೃಷ್ಣ ಮೃಗದ ಚಿತ್ರವನ್ನು ಟ್ವೀಟ್ ಮಾಡಿ ಕೌರ್ ಟ್ವೀಟ್ ಬಗ್ಗೆ ಅಣಕವಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com