ನಿಮ್ಮನ್ನು ಭೂಮಿಗೆ ತರುವುದು ಒಬ್ಬ ಹೆಣ್ಣು, ಆಕೆಗೆ ಆಗೌರವ ತೋರಲು ನಿಮಗೆ ಹಕ್ಕಿಲ್ಲ: ಸೆಹ್ವಾಗ್

ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್...
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್

ನವದೆಹಲಿ: ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ.

ಒಬ್ಬರ ಬಟ್ಟೆ ನೋಡಿ ದೌರ್ಜನ್ಯಕ್ಕೆ ಮುಂದಾಗುವುದು ಸರಿಯಲ್ಲ. ಒಬ್ಬರ ಫ್ಯಾಶನ್ ಬಗ್ಗೆ ಮಾತನಾಡುವ ಹಕ್ಕು ಮತ್ತೊಬ್ಬರಿಗೆ ಇರುವುದಿಲ್ಲ, ಯಾರಾದರೂ ಅಂತಹ ಉಡುಪು ಧರಿಸಿದ್ದಾರೆಂದರೆ ಎಲ್ಲದಕ್ಕೂ ಒಪ್ಪಿಗೆ ಎನ್ನುವುದಲ್ಲ ಎಂದು ಟ್ವಿಟರ್ ನಲ್ಲಿ ಹೇಳಿರುವ ಸೆಹ್ವಾಗ್, ಒಬ್ಬ ಮಹಿಳೆ ನಿಮ್ಮನ್ನು ಈ ಭೂಮಿಗೆ ತರುವುದು ಆಕೆಯ ಮೇಲೇ ದೌರ್ಜನ್ಯ ನಡೆಸುವ ಹಕ್ಕು ನಿಮಗಿಲ್ಲ ಎಂಬ ಬರಹವುಳ್ಳ ಚಿತ್ರ ಪ್ರಕಟಿಸಿದ್ದಾರೆ. ಇಂತಹ ಘಟನೆಗಳು ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಪಾಶ್ಚಾತ್ಯ ಉಡುಗೆ ತೊಟ್ಟ ಯುವತಿಯರ ಮೇಲೆ ಮಧ್ಯರಾತ್ರಿ ನಡೆದ ಹೊಸ ವರ್ಷಾಚರಣೆಯಲ್ಲಿ ಕೆಲವು ಯುವಕರು ಲೈಂಗಿಕ ದೌರ್ಜನ್ಯ ನಡೆಸಿದ್ದು ಭಾರೀ ಸುದ್ದಿಯಾಗಿದೆ. ಈ ಬಗ್ಗೆ ಕೆಲವು ಯುವತಿಯರ ಪಾಶ್ಚಾತ್ಯ ಉಡುಗೆಯೇ ಅಪರಾಧಕ್ಕೆ ಕಾರಣ ಎಂದು ಟೀಕಿಸಿದ್ದರು. ಇದರ ವಿರುದ್ಧ ಸೆಹ್ವಾಗ್ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com