ಕೋಲ್ಕತಾ: ಕೋಲ್ಕತಾದ ಈಡೆನ್ ಗಾರ್ಡನ್ ನ ಕ್ರಿಕೆಟ್ ಬ್ಲಾಕ್ ಒಂದಕ್ಕೆ (ಸಿ ಸ್ಟ್ಯಾಂಡ್) ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಹೆಸರನ್ನು ಕೆ ಬ್ಲಾಕ್ ಗೆ, ಡಿ ಬ್ಲಾಕ್ ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಆರಂಭಿಕ ಬ್ಯಾಟ್ಸ್'ಮ್ಯಾನ್ ಪಂಕಜ್ ರಾಯ್ ಹಾಗೂ ಹೆಚ್ ಬ್ಲಾಕ್ ಗೆ ಬಿಸಿಸಿಐ ನ ಮಾಜಿ ಅಧ್ಯಕ್ಷ ಬಿಎನ್ ದತ್ ಅವರ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ.
ತಮ್ಮ ತಂದೆಯ ಹೆಸರನ್ನು ಪ್ರೇಕ್ಷಕರ ಗ್ಯಾಲರಿ ಒಂದಕ್ಕೆ ನಾಮಕರಣ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎನ್ ದತ್ ಅವರ ಪುತ್ರ ಸುಬ್ರತಾ ದತ್, ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಗೆ ಧನ್ಯವಾದ ತಿಳಿಸಿದ್ದಾರೆ.