ಮೊದಲ ಟಿ20: ಭಾರತದ ವಿರುದ್ಧ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಭರ್ಜರಿ ಗೆಲುವು

ಭಾರತ-ಇಂಗ್ಲೆಂಡ್ ನಡುವಿನ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಂಗ್ಲರು 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ಕಾನ್ಪುರ: ಭಾರತ-ಇಂಗ್ಲೆಂಡ್ ನಡುವಿನ ಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಆಂಗ್ಲರು 7 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ವೈಫಲ್ಯ ಅನುಭವಿಸಿ ಇಂಗ್ಲೆಂಡ್ ಗೆಲುವಿಗೆ 148ರನ್ ಗಳ ಸವಾಲು ನೀಡಿತ್ತು.
148ರನ್ ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್, ನಾಯಕ ಇಯಾನ್ ಮಾರ್ಗನ್(51) ಅವರ ಆಕರ್ಷಕ ಶತಕ ಹಾಗೂ ಜೋ ರೂಟ್(46) ಉತ್ತಮ ಬ್ಯಾಟಿಂಗ್ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಭಾರತದ ಕೆ.ಎಲ್. ರಾಹುಲ್ (8) ಬೇಗ ವಿಕೆಟ್ ನೀಡಿ ಆರಂಭಿಕ ಆಘಾತ ನೀಡಿದರಾದರೂ ವಿರಾಟ್ ಕೊಹ್ಲಿ (29) ಮತ್ತು ಸುರೇಶ್ ರೈನಾ (34) ಕೆಲ ಸಮಯ ಬ್ಯಾಟಿಂಗ್ ಕಾಯ್ದುಕೊಂಡು ತಂಡಕ್ಕೆ ಕೊಂಚ ಚೇತರಿಕೆ ನೀಡಿದ್ದರಿಂದಾಗಿ ಭಾರತ ನಿಗದಿತ ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
ಏಕದಿನ ಸರಣಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಯುವರಾಜ್ ಸಿಂಗ್ (12) ಮತ್ತು ಕನ್ನಡಿಗ ಮನೀಶ್ ಪಾಂಡೆ (3), ಹಾರ್ದಿಕ್ ಪಾಂಡ್ಯ (9), ಕೂಡ ನಿರೀಕ್ಷೆಯ ಆಟ ಪ್ರದರ್ಶಿಸಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (36*) ತಂಡದ ಮೊತ್ತವನ್ನು ಏರಿಸುವಲ್ಲಿ ಏಕಾಂಗಿ ಹೋರಾಟ ನಡೆಸಿದರು. ಕಡೆಯ ಓವರ್​ಗಳಲ್ಲಿ ಧೋನಿಗೆ ಸಾಥ್ ನೀಡಿದ ಪರ್ವೆಜ್ ರಸೂಲ್ (5) ರನ್ ಗಳಿಸಿದರು. ರಸೂಲ್ ಈ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಟ್ವಿಂಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com