ಶಶಾಂಕ್ ಮನೋಹರ್-ಶಹರ್ಯಾರ್ ಖಾನ್
ಕ್ರಿಕೆಟ್
ಲಾಹೋರ್‌ಗೆ ಭೇಟಿ ನೀಡಿ, ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್‌ಗೆ ಶಹರ್ಯಾರ್ ಖಾನ್ ಆಹ್ವಾನ
ಮುಂದಿನ ತಿಂಗಳು ಲಾಹೋರ್ ಗೆ ಭೇಟಿ ನೀಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಖ್ಯಸ್ಥ ಶಶಾಂಕ್ ಮನೋಹರ್ ಅವರಿಗೆ ಪಾಕಿಸ್ತಾನ ಕ್ರಿಕೆಟ್...
ನವದೆಹಲಿ: ಮುಂದಿನ ತಿಂಗಳು ಲಾಹೋರ್ ಗೆ ಭೇಟಿ ನೀಡುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮುಖ್ಯಸ್ಥ ಶಶಾಂಕ್ ಮನೋಹರ್ ಅವರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಧ್ಯಕ್ಷ ಶಹರ್ಯಾರ್ ಖಾನ್ ಆಹ್ವಾನ ನೀಡಿದ್ದಾರೆ.
ಲಾಹೋರ್ ಗೆ ಭೇಟಿ ನೀಡಿ ಎಂದು ಲಂಡನ್ ನಲ್ಲಿ ನಡೆದಿದ್ದ ಐಸಿಸಿ ಸಭೆಯ ಸಂದರ್ಭದಲ್ಲಿ ಶಶಾಂಕ್ ಮನೋಹರ್ ಅವರಿಗೆ ಆಹ್ವಾನ ನೀಡಿದ್ದೇ ಈ ಕುರಿತು ಪರಿಶೀಲಿಸುತ್ತೇನೆ ಎಂದು ಹೇಳಿದ್ದರು ಆದರೆ ಇದುವರೆಗೂ ದಿನಾಂಕವನ್ನು ಖಚಿತಪಡಿಸಿಲ್ಲ ಎಂದು ಶಹರ್ಯಾರ್ ಖಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಿಸಿಬಿ ಅಧ್ಯಕ್ಷರಾಗಿ ಶಹರ್ಯಾರ್ ಖಾನ್ ಮೂರು ವರ್ಷಗಳ ಅಧಿಕಾರವಾಧಿ ಪೂರೈಸಿದ್ದು ಅವರ ಬೀಳ್ಕೊಡುಗೆ ಸಮಾರಂಭಕ್ಕೆ ಶಶಾಂಕ್ ರನ್ನು ಆಹ್ವಾನಿಸಲಾಗಿದೆ ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ಉಗ್ರರ ದಾಳಿಯಿಂದಾಗಿ 2009ರಿಂದ ಪಾಕಿಸ್ತಾನದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಗಳು ನಡೆದಿಲ್ಲ. ಹೀಗಾಗಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಅನುಮತಿ ನೀಡುವಂತೆ ಶಶಾಂಕ್ ಅವರ ಮನವೊಲಿಸುವ ಯತ್ನ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ