ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿಯ ವಾರ್ಷಿಕ ಸಂಭಾವನೆ ಎಷ್ಟು ಗೊತ್ತೇ?

ಭಾರತ ಕ್ರಿಕೆಟ್ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ಕೋಚ್ ರವಿ ಶಾಸ್ತ್ರಿ ಅವರ ವಾರ್ಷಿಕ ಸಂಭಾವನೆಯನ್ನು 7-7.5 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ರವಿಶಾಸ್ತ್ರಿ
ರವಿಶಾಸ್ತ್ರಿ
ನವದೆಹಲಿ: ಭಾರತ ಕ್ರಿಕೆಟ್ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ಕೋಚ್ ರವಿ ಶಾಸ್ತ್ರಿ ಅವರ ವಾರ್ಷಿಕ ಸಂಭಾವನೆಯನ್ನು 7-7.5 ಕೋಟಿಗೆ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ 7 ಕೋಟಿ ರೂ ಸಂಭಾವನೆ ನಿಗದಿಪಡಿಸಿದೆ. ಇಷ್ಟೇ ಮೊತ್ತವನ್ನು ಮೇ ತಿಂಗಳಲ್ಲಿ ಅನಿಲ್ ಕುಂಬ್ಳೆ ಸಹ ಕೇಳಿದ್ದರು. ಆದರೆ ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ ಗರಿಷ್ಠ 7.5 ಕೋಟಿ ನಿಗದಿಯಾಗುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. 
ಭಾರತ ಕ್ರಿಕೆಟ್ ತಂಡದ ನಿರ್ದೇಶಕರಾಗಿದ್ದಾಗ ಶಾಸ್ತ್ರಿ ಅವರಿಗೆ 7-7.5 ಕೋಟಿಯಷ್ಟು ಸಂಭಾವನೆ ನೀಡಲಾಗುತ್ತಿತ್ತು. ಇನ್ನು ಶಾಸ್ತ್ರಿ ಅವರೊಂದಿಗೆ ತೆರಳುವ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಗಳಿಗೆ ಗರಿಷ್ಠ 2 ಕೋಟಿ ಸಂಭಾವನೆ ನಿಗದಿಯಾಗುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com