ಟೀಂ ಇಂಡಿಯಾದ ಅಲ್ ರೌಂಡರ್ ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಮುಂಜಾನೆ ರಿವಾ ಸೋಲಂಕಿ ಅವರು ಮಗುವಿಗೆ ಜನ್ಮ ನೀಡಿದ್ದು ಚಾಂಪಿಯನ್ ಟ್ರೋಫಿ ಹಿನ್ನೆಲೆ ಇಂಗ್ಲೆಂಡ್ ನಲ್ಲಿರುವ ಜಡೇಜಾ ಟೀಂ ಇಂಡಿಯಾ ಆಟಗಾರರೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.
ರವೀಂದ್ರ ಜಡೇಜಾ ಮತ್ತು ರಿವಾ ಸೋಲಂಕಿ ದಂಪತಿ 2016ರ ಏಪ್ರಿಲ್ ನಲ್ಲಿ ವಿವಾಹವಾಗಿದ್ದರು.