ಪಾಕ್ 'ಫಿಕ್ಸಿಂಗ್'ನಿಂದಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ: ಪಾಕ್ ಮಾಜಿ ನಾಯಕ

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯಕ್ಕೆ ಎದುರು...
ಪಾಕಿಸ್ತಾನ
ಪಾಕಿಸ್ತಾನ
ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯಕ್ಕೆ ಎದುರು ನೋಡುತ್ತಿರುವಾಗಲೇ ಪಾಕಿಸ್ತಾನ ತಂಡದ ಮಾಜಿ ನಾಯಕ ಹೊಸ ಬಾಂಬ್ ಸಿಡಿಸಿದ್ದಾರೆ. 
ಪಾಕಿಸ್ತಾನ ಮ್ಯಾಚ್ ಫಿಕ್ಸಿಂಗ್ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ತಲುಪಿಸಿದೆ ಎಂದು ಮಾಜಿ ನಾಯಕ ಅಮೀರ್ ಸೊಹೈಲ್ ಆರೋಪಿಸಿದ್ದಾರೆ. 
ಖಾಸಗಿ ಮಾಧ್ಯಮದ ಸಂದರ್ಶನದ ವೇಳೆ ಅಮೀರ್ ಸೊಹೈಲ್ ತಂಡ ಚೆನ್ನಾಗಿ ಆಡಿದರೆ ಅವರನ್ನು ಅಭಿನಂದಿಸುತ್ತೇನೆ. ಕಳಪೆ ಪ್ರದರ್ಶನ ನೀಡಿದರೆ ಟೀಕಿಸುತ್ತೇನೆ. ಇಂಗ್ಲೆಂಡ್ ಅನ್ನು ಪಾಕಿಸ್ತಾನ ಪರಾಭವಗೊಳಿಸಿದಾಗ ಪಾಕ್ ಕ್ರಿಕೆಟ್ ತಂಡ ಸಂತೋಷದಿಂದ ಕುಣಿದಾಡಿದ್ದು ಕಾಣಿಸಲಿಲ್ಲ. ಯಾಕೆಂದರೆ ಫೈನಲ್ ಗೆ ತಲುಪುತ್ತೇವೆ ಎಂದು ಅವರಿಗೆ ಮುಂಚಿತವಾಗಿಯೇ ತಿಳಿದಿತ್ತು ಎಂದು ಪಾಕಿಸ್ತಾನ ಕ್ರಿಕೆಟ್ ಟೀಂ ಮೇಲೆ ಪರೋಕ್ಷ ಆರೋಪ ಮಾಡಿದ್ದಾರೆ. 
ಪಾಕಿಸ್ತಾನ ಭಾರತದೊಂದಿಗಿನ ಪಂದ್ಯದ ಸೋಲಿನ ಬಳಿಕ ಆಶ್ಚರ್ಯಕರ ರೀತಿಯಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳನ್ನು ಮಣಿಸಿ ಫೈನಲ್ ತಲುಪಿದೆ. ಪಾಕ್ ಫೈನಲ್ ತಲುಪಲು ಕಾರಣ ಹಾಗೂ ಹಿಂದಿನ ಶಕ್ತಿ ಏನು ಎಂಬುದು ನಮಗೆಲ್ಲರಿಗೂ ಗೊತ್ತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com