ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಪಾಕಿಸ್ತಾನ ಗೆಲುವಿನ ಲಯಕ್ಕೆ ಮರಳಿದೆ: ಶಾಹೀದ್ ಆಫ್ರಿದಿ

ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಪಾಕಿಸ್ತಾನ ಗೆಲುವಿನ ಲಯಕ್ಕೆ ಮರಳಿದ್ದು ಮುಂದಿನ ದಿನಗಳಲ್ಲಿ ತಂಡ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಮಾಜಿ...
ಶಾಹೀದ್ ಆಫ್ರಿದಿ
ಶಾಹೀದ್ ಆಫ್ರಿದಿ
Updated on
ಲಂಡನ್: ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಪಾಕಿಸ್ತಾನ ಗೆಲುವಿನ ಲಯಕ್ಕೆ ಮರಳಿದ್ದು ಮುಂದಿನ ದಿನಗಳಲ್ಲಿ ತಂಡ ಮತ್ತಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಮಾಜಿ ಕ್ರಿಕೆಟಿಗ ಶಾಹೀದ್ ಆಫ್ರಿದಿ ಹೇಳಿದ್ದಾರೆ. 
ಲಂಡನ್ ನ ಓವಲ್ ಮೈದಾನದಲ್ಲಿ ನಡೆದ ಭಾರತ ವಿರುದ್ಧ ಹೈಟೆನ್ಷನ್ ಪಂದ್ಯದಲ್ಲಿ ಪಾಕಿಸ್ತಾನ 180 ರನ್ ಗಳಿಂದ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಮಾಜಿ ಕ್ರಿಕೆಟಿಗ ಪಾಕಿಸ್ತಾನ ತಂಡವನ್ನು ಪ್ರಶಂಸಿಸಿದ್ದಾರೆ. 
ಇದೊಂದು ಜಯವನ್ನು ಅಭಿಮಾನಿಗಳು ದೀರ್ಘಕಾಲದವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇದೊಂದು ಅದ್ಭುತ ಜಯ. ಗೆಲುವು ಅನಿಶ್ಚಿತ ಅಂದುಕೊಂಡಿದ್ದಾಗ ತಂಡ ಉನ್ನತ ಗೆಲುವನ್ನು ತಂದುಕೊಂಡಿದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com