ಕುಂಬ್ಳೆ ವಿರುದ್ಧ ದೂರು ನೀಡಿದರೆ, ಆಟಗಾರರನ್ನೇ ತಂಡದಿಂದ ಕೈಬಿಡಿ: ಸುನಿಲ್ ಗವಾಸ್ಕರ್

ಅತ್ಯಂತ ಮೃದು ಸ್ವಭಾವದ ಕೋಚ್ ಬೇಕು ಎನ್ನುವಂತಹ ಆಟಗಾರರನ್ನು ಹಾಗೂ ಕುಂಬ್ಳೆಯಂತಹ ಶಿಸ್ತಿನ ಕೋಚ್ ವಿರುದ್ಧ ದೂರು ನೀಡುವವರನ್ನು ತಂಡದಿಂದಲೇ ಕೈಬಿಡಬೇಕೆಂದು ಸುನಿಲ್ ಗವಾಸ್ಕರ್...
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್
ಭಾರತ ಕ್ರಿಕೆಟ್ ತಂಡದ ಆತಗಾರರು ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದು, ತಾವು ಹೇಳಿದಂತೆ ಕೇಳುವ ಕೋಚ್ ಬೇಕು ಎನ್ನುತ್ತಿರುವ ಆಟಗಾರರ ಮನಸ್ಥಿತಿಯನ್ನು ಟೀಕಿಸಿದ್ದಾರೆ. 
ಅತ್ಯಂತ ಮೃದು ಸ್ವಭಾವದ ಕೋಚ್ ಬೇಕು ಎನ್ನುವಂತಹ ಆಟಗಾರರನ್ನು ಹಾಗೂ ಕುಂಬ್ಳೆಯಂತಹ ಶಿಸ್ತಿನ ಕೋಚ್ ವಿರುದ್ಧ ದೂರು ನೀಡುವವರನ್ನು ತಂಡದಿಂದಲೇ ಕೈಬಿಡಬೇಕೆಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಪ್ರಾಕ್ಟೀಸ್ ಗೆ ಬರಬೇಡಿ ಶಾಪಿಂಗ್ ಮಾಡಿ ಎಂದು ಕಳಿಸುವ ಕೋಚ್ ನ್ನು ತಂಡಡ ಆಟಗಾರರು ಬಯಸುತ್ತಿದ್ದಾರೆ. 
ಕುಂಬ್ಳೆಯಂಥ ನಿಷ್ಠುರ, ವ್ಯಕ್ತಿ ಬಗ್ಗೆ ಯಾರಾದರೂ ಆಟಗಾರರು ದೂರು ನೀಡುತ್ತಿದ್ದಾರೆಂದರೆ, ಅಂಥಹ ಆಟಗಾರರನ್ನು ತಂಡದಿಂದಲೇ ಕೈಬಿಡಬೇಕಾಗುತ್ತದೆ," ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕೋಚ್ ಕುಂಬ್ಳೆ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಅದ್ಭುತ ಸಾಧನೆ ಮಾಡಿದೆ. ಆದರೆ ಇತ್ತೀಚಿನ ಬೆಳವಣಿಗೆಗಳು "ಆಟಗಾರರು ಹೇಳಿದಂತೆ ಕೇಳುವ ಕೋಚ್ ಭಾರತಕ್ಕೆ ಬೇಕೆನ್ನುವ ಅರ್ಥ ನೀಡುತ್ತಿವೆ. ಇದು ಸರಿಯಲ್ಲ," ಎಂದು ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com