ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕ್ ತಂಡದ ಪ್ರತಿ ಆಟಗಾರರಿಗೆ 10 ಮಿಲಿಯನ್ ಬಹುಮಾನ

ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ಪ್ರತಿ ಆಟಗಾರರಿಗೂ ಪಾಕ್ ಸರ್ಕಾರ 10 ಮಿಲಿಯನ್ ಬಹುಮಾನ ಘೋಷಿಸಿದೆ...
ಪಾಕಿಸ್ತಾನ
ಪಾಕಿಸ್ತಾನ
Updated on
ಕರಾಚಿ: ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡದ ಪ್ರತಿ ಆಟಗಾರರಿಗೂ ಪಾಕ್ ಸರ್ಕಾರ 10 ಮಿಲಿಯನ್ ಬಹುಮಾನ ಘೋಷಿಸಿದೆ. 
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಆಲ್ ರೌಂಡರ್ ಪ್ರದರ್ಶನ ನೀಡಿ ಟೀಂ ಇಂಡಿಯಾ ತಂಡವನ್ನು 180 ರನ್ ಗಳಿಂದ ಮಣಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಟಗಾರರಿಗೆ 10 ಮಿಲಿಯನ್ ಬಹುಮಾನ ಘೋಷಿಸಿದ್ದಾರೆ. 
ಕಳೆದ ಭಾನುವಾರ ಲಂಡನ್ ನ ದಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಭರ್ಜರಿ 339 ರನ್ ಕಲೆ ಹಾಕಿತ್ತು. 340 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಟೀಂ ಇಂಡಿಯಾ ಆಟಗಾರರು 33.3 ಓವರ್ ಗಳಲ್ಲಿ 158 ರನ್ ಗಳಿಗೆ ಆಲೌಟ್ ಆಗುವ ಮೂಲಕ ಪಾಕ್ ತಂಡಕ್ಕೆ 180 ರನ್ ಗಳಿಂದ ಶರಣಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com