ಈತ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ 140 ಕೆಜಿ ತೂಕ, 6.6 ಅಡಿ ಉದ್ದ, ಆಲ್‌ರೌಂಡರ್

ಕ್ರಿಕೆಟ್ ನಲ್ಲಿ ಉತ್ತಮ ಬ್ಯಾಟಿಂಗ್ ಜತೆಗೆ ಉತ್ತಮ ಫೀಲ್ಡಿಂಗ್ ಮಾಡಲು ಫಿಟ್ನೆಸ್ ಬಹಳ ಮುಖ್ಯ. ಅಂತಹದರಲ್ಲಿ ವೆಸ್ಟ್ ಇಂಡೀಸ್ ನ ಆಟಗಾರನೊಬ್ಬ 140 ಕೆಜಿ ತೂಕ ಮತ್ತು 6.6 ಅಡಿ...
Rahkeem Cornwall
Rahkeem Cornwall
ಕ್ರಿಕೆಟ್ ನಲ್ಲಿ ಉತ್ತಮ ಬ್ಯಾಟಿಂಗ್ ಜತೆಗೆ ಉತ್ತಮ ಫೀಲ್ಡಿಂಗ್ ಮಾಡಲು ಫಿಟ್ನೆಸ್ ಬಹಳ ಮುಖ್ಯ. ಅಂತಹದರಲ್ಲಿ ವೆಸ್ಟ್ ಇಂಡೀಸ್ ನ ಆಟಗಾರನೊಬ್ಬ 140 ಕೆಜಿ ತೂಕ ಮತ್ತು 6.6 ಅಡಿ ಉದ್ದವಿದ್ದು ಆಲ್ರೌಂಡರ್ ಆಟವಾಡುತ್ತಾರೆ. 
ರಕೀಮ್ ಕಾರ್ನವಾಲ್ ಕ್ರಿಕೆಟ್ ಇತಿಹಾಸದಲ್ಲೇ ದೈತ್ಯ ಕ್ರಿಕೆಟ್ ಆಟಗಾರ ಎನಿಸಿದ್ದಾರೆ. ಕಾರ್ನ್ವಾಲ್ ಸದ್ಯ ಐಸ್ಲಾಂಡ್ ನ ಆಂಟಿಗ್ಯೂನ ಆಟಗಾರನಾಗಿದ್ದು ಭವಿಷ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸಲಿದ್ದಾರೆ. 
2016ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಭಾರತ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಇಲೆವನ್ ತಂಡದಲ್ಲಿ ಆಡಿದ್ದ ಕಾರ್ನ್ವಾಲ್ 41 ರನ್ ಸಿಡಿಸಿದ್ದು, 5 ವಿಕೆಟ್ ಪಡೆದಿದ್ದರು. ಇದರಲ್ಲಿ ಅಂಜಿಕ್ಯ ರಹಾನೆ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ವಿಕೆಟ್ ಕಬಳಿಸಿದ್ದು ವಿಶೇಷವಾಗಿತ್ತು.
ಬಳಿಕ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ಎ ತಂಡದಲ್ಲಿ ಆಡಿದ್ದ ಕಾರ್ನ್ವಾಲ್ ಸರಣಿಯಲ್ಲಿ 23 ವಿಕೆಟ್ ಪಡೆದಿದ್ದರು. ಸರಣಿಯೊಂದರಲ್ಲಿ 20 ವಿಕೆಟ್ ಪಡೆದಿದ್ದು ಸಾಧನೆಯಾಗಿತ್ತು. 
ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯವಾಡಿದ್ದ ಕಾರ್ನ್ವಾಲ್ 59 ರನ್ ಸಿಡಿಸಿದ್ದು, 10 ಓವರ್ ನಲ್ಲಿ 39 ರನ್ ನೀಡಿ 1 ವಿಕೆಟ್ ಪಡೆದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com