ಜಮೈಕಾ: ದೇಶಿಯ ಕ್ರಿಕೆಟ್ ಪಂದ್ಯಾವಳಿ ಅಪ್ಪ, ಮಗ ತಲಾ ಅರ್ಧಶತಕ ಸಿಡಿಸಿ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಗಯಾನ ತಂಡದ ಪರ ತಂದ ಶಿವನಾರಾಯಣ್ ಚಂದ್ರಪಾಲ್ 57 ರನ್, ಮಗ ತ್ಯಾಗನಾರಾಯಣ್ ಚಂದ್ರಪಾಲ್ 58 ರನ್ ಗಳಿಸಿ ಮಿಂಚಿದರು. ಇವರಿಬ್ಬರ ಅರ್ಧಶತಕ ನೆರವಿನಿಂದ ಗಯಾನಾ ತಂಡ 88.3 ಓವರ್ ಗಳಲ್ಲಿ 262 ರನ್ ಗಳಿಸಿತು.
ಗಯಾನ ತಂಡದ ಆರಂಭಿಕ ಆಟಗಾರನಾಗಿರುವ ತ್ಯಾಗನಾರಾಯಣ್ 2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ತಂದೆ ಮಗ ಇಬ್ಬರು ಎಡಗೈ ಬ್ಯಾಟ್ಸ್ ಮನ್ ಆಗಿದ್ದಾರೆ.