ಡೆಲ್ಲಿ ಅಬ್ಬರಕ್ಕೆ ನಡುಗಿದ ಗುಜರಾತ್ ಲಯನ್ಸ್

ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್(97) ಮತ್ತು ಸಂಜು ಸ್ಯಾಮ್ಸನ್ 61 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 7 ವಿಕೆಟ್...
ಡೆಲ್ಲಿ ಡೇರ್ ಡೆವಿಲ್ಸ್
ಡೆಲ್ಲಿ ಡೇರ್ ಡೆವಿಲ್ಸ್
ನವದೆಹಲಿ: ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್(97) ಮತ್ತು ಸಂಜು ಸ್ಯಾಮ್ಸನ್ 61 ರನ್ ಗಳ ಭರ್ಜರಿ ಬ್ಯಾಟಿಂಗ್ ನಿಂದಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 7 ವಿಕೆಟ್ ಗಳಿಂದ ಭರ್ಜರಿ ಜಯ ಗಳಿಸಿದ್ದು ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 
ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 208 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. 209 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿಗೆ ಯುವ ಬ್ಯಾಟ್ಸ್ ಮನ್ ಗಳು ಸಾಥ್ ನೀಡಿದರು. ರಿಷಭ್-ಸ್ಯಾಮ್ಸನ್ ಸಿಕ್ಸರ್ ಸುರಿಮಳೆ ಯೊಂದಿಗೆ ಡೆಲ್ಲಿ ತಂಡ 17.3 ಓವರ್ ಗಳಲ್ಲಿ 3 ವಿಕೆಟ್ 214 ರನ್ ಪೇರಿಸಿ ಭರ್ಜರಿ ಚೇಸಿಂಗ್ ಸಾಧನೆ ಮಾಡಿತು. 
ಡೆಲ್ಲಿ ಐಪಿಎಲ್ ಇತಿಹಾಸದ 2ನೇ ಗರಿಷ್ಠ ಚೇಸಿಂಗ್ ದಾಖಲೆ ಬರೆಯಿತು. 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ನೀಡಿದ 215 ರನ್ ಸವಾಲನ್ನು ರಾಜಸ್ಥಾನ್ ರಾಯಲ್ಸ್ ತಂಡ ಬೆನ್ನಟ್ಟಿದ್ದು ಗರಿಷ್ಠ ಚೇಸಿಂಗ್ ಸಾಧನೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com