ವಿದೇಶಿ ಆಟಗಾರರ ವಿರುದ್ದ ವೀರೇಂದ್ರ ಸೆಹ್ವಾಗ್ ವಾಗ್ದಾಳಿ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪ್ಲೇ-ಆಫ್ ಹಂತಕ್ಕೇರುವ ಅವಕಾಶ ವಂಚಿತರಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿದೇಶಿ ಆಟಗಾರರ ವಿರುದ್ಧ ವೀರೇಂದ್ರ...
ವೀರೇಂದ್ರ ಸೆಹ್ವಾಗ್
ವೀರೇಂದ್ರ ಸೆಹ್ವಾಗ್
Updated on
ಮೊಹಾಲಿ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪ್ಲೇ-ಆಫ್ ಹಂತಕ್ಕೇರುವ ಅವಕಾಶ ವಂಚಿತರಾದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿದೇಶಿ ಆಟಗಾರರ ವಿರುದ್ಧ ವೀರೇಂದ್ರ ಸೆಹ್ವಾಗ್ ಕಿಡಿಕಾರಿದ್ದಾರೆ. 
ಪುಣೆ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಸೋಲು ಕಾಣುವ ಮೂಲಕ ಪ್ಲೇ-ಆಫ್ ಕನಸು ನುಚ್ಚುನೂರಾಯಿತು. ಇದರಿಂದ ಬೇರಸಗೊಂಡ ಪಂಜಾಬ್ ತಂಡದ ನಿರ್ದೇಶಕ ವೀರೇಂದ್ರ ಸೆಹ್ವಾಗ್ ಹಾಶಿಂ ಆಮ್ಲಾ ಹೊರತು ಪಡಿಸಿ ಉಳಿದೆಲ್ಲಾ ವಿದೇಶಿ ಆಟಗಾರರು ವಿಫಲರಾಗಿದ್ದಾರೆ. ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ 9 ಪಂದ್ಯಗಳಲ್ಲಿ ವಿಫಲರಾದರು. ಅತ್ಯಂತ ಅನುಭವಿ ಆಟಗಾರರಾದ ಅವರು ನಾಯಕನಾಗಿ ಜವಬ್ದಾರಿ ಹೊತ್ತುಕೊಂಡು ಆಡಬೇಕಿತ್ತು ಎಂದು ಕಿಡಿಕಾರಿದ್ದಾರೆ. 
ಇನ್ನು ತಂಡದಲ್ಲಿ ಸ್ಫೋಟಕ ಆಟಗಾರ ಶಾನ್ ಮಾರ್ಷ್, ಮಾರ್ಟಿನ್ ಗಪ್ಟಿಲ್ ಸಹ ಇದ್ದು ಅವರು ತಮ್ಮ ಜವಾಬ್ದಾರಿಯುವ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಈ ಆಟಗಾರರ ಮೇಲೆ ನಮಗೆ ನಿರೀಕ್ಷೆ ಜಾಸ್ತಿ ಇತ್ತು. ಅದನ್ನು ಹುಸಿ ಮಾಡಿದ್ದಾರೆ ಎಂದು ಸೆಹ್ವಾಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com